ಅತಿಯಾದರೆ ಅಮೃತವೂ ವಿಷ ಎಂಬಂತೆ.. ಪ್ರತಿ ನಿತ್ಯ ಕಷಾಯ ಕುಡಿಯುವುದು ಅಪಾಯ..!?

ಮೊದಲೆಲ್ಲಾ ನಮ್ಮಲ್ಲಿ ಹಲವು ಮಂದಿ ಸಾಮಾನ್ಯ ಶೀತ, ನೆಗಡಿಗೆ ವೈದ್ಯರ ಬಳಿ ಹೋಗುವ ಬದಲು ಮನೆಯಲ್ಲೇ ಕಷಾಯ ತಯಾರಿಸಿ ಕುಡಿಯುತ್ತಿದ್ದರು. ಕಷಾಯವನ್ನು ಕುಡಿಯುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ ಎಂದು ನಂಬಲಾಗಿದೆ.

truenews

ಹಾಗಾಗಿಯೇ, ಕಾರೋನಾ ಕಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಕಷಾಯ ಸೇವನೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ ಪ್ರತಿ ನಿತ್ಯ ಕಷಾಯ ಕುಡಿಯುವುದರಿಂದ ಅದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡಬಹುದು. ಮೂತ್ರಪಿಂಡ, ಯಕೃತ್ತಿನ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡಬಹುದು. ಹಾಗಾದರೆ ಕಷಾಯ ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳನ್ನು ತಿಳಿಯಿರಿ. 

truenews

ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ: ಪ್ರತಿದಿನ ಕಷಾಯವನ್ನು ಕುಡಿಯುವುದರಿಂದ ನಮ್ಮ ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಹೆಚ್ಚಿನ ಜನರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರತಿದಿನ ಕಷಾಯವನ್ನು ಕುಡಿಯಲು ಪ್ರಾರಂಭಿಸುತ್ತಾರೆ, ಇದು ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರತಿದಿನ ಕಷಾಯವನ್ನು ಕುಡಿಯುವುದರಿಂದ ದೇಹದಲ್ಲಿ ಕ್ರಿಯೇಟಿನೈನ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ, ಇದು ಒಂದು ಸಮಯದಲ್ಲಿ ನಮ್ಮ ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಕಷಾಯದ ಪರಿಣಾಮವು ಬಿಸಿಯಾಗಿರುತ್ತದೆ, ಇದರಿಂದಾಗಿ ಕ್ರಮೇಣ ಎದೆಯಲ್ಲಿ ನೋವು ಮತ್ತು  ಎದೆಯುರಿಯಂತಹ ಸಮಸ್ಯೆಗಳೂ ಸಹ ನಿಮ್ಮನ್ನು ಕಾಡಬಹುದು. ಆದರೆ ಇವುಗಳನ್ನು ನಿರ್ಲಕ್ಷಿಸಿದರೆ ಅದು ಮೂತ್ರಪಿಂಡದ ಹಾನಿಯ ಅಪಾಯವನ್ನು ಹೆಚ್ಚಿಸುತ್ತದೆ.

  • ಹೆಲ್ತ್ ಬ್ಯೂರೋ true news ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.