ಡಿಕೆಶಿ ಹಾಡಿದ ಗೀತೆಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ
ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರ್‌ಎಸ್‌ಎಸ್ ಸಂಘದ ಗೀತೆ ʻನಮಸ್ತೇ ಸದಾ ವತ್ಸಲೇ ಮಾತೃಭೂಮೇʼ ಹಾಡಿದ ಘಟನೆಯು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಗಸ್ಟ್ 21ರಂದು ನಡೆದಿದ್ದ ವಿಧಾನಸಭಾ ಚರ್ಚೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಅವರ ಟಾಂಗ್‌ಗೆ ತಕ್ಷಣ ಪ್ರತಿಕ್ರಿಯಿಸಿದ ಡಿಕೆಶಿ, ಆರ್‌ಎಸ್‌ಎಸ್ ಗೀತೆ ಹಾಡುವ ಮೂಲಕ ಸೂಕ್ಷ್ಮ ರಾಜಕೀಯ ಸಂದೇಶವನ್ನೂ ನೀಡಿದ್ದಾರೆ.
ಚರ್ಚೆ ನಡೆಯುತ್ತಿದ್ದಾಗ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಉತ್ತರಿಸುತ್ತಿದ್ದರು. ಈ ವೇಳೆ ಆರ್. ಅಶೋಕ್ ಅವರು, ಡಿಕೆಶಿ ಅವರು RCB ಗೆಲುವಿನಲ್ಲಿ ಭಾಗವಹಿಸಿದ್ದುದನ್ನು ಪ್ರಸ್ತಾಪಿಸಿದರು. ಪ್ರತಿಯಾಗಿ ಡಿಕೆಶಿ ಅವರು, “ನಾನು ಕ್ರಿಕೆಟ್ ಅಭಿಮಾನಿ, ಕ್ರೀಡಾಂಗಣಕ್ಕೂ ಹೋದಿದ್ದೆ, ಕಪ್‍ಗೂ ಮುತ್ತು ಕೊಟ್ಟಿದ್ದೆ” ಎಂದರು. ಆದರೆ ಅಶೋಕ್ ಟಾಂಗ್ ನೀಡಿದಂತೆ, “ಆರ್‌ಎಸ್‌ಎಸ್ ಚಡ್ಡಿ ಹಾಕಿದ್ರಲ್ಲ” ಎಂದರು.
ಇದಕ್ಕೆ ತಕ್ಷಣವೇ ಪ್ರತಿಸ್ಪಂದಿಸಿದ ಡಿಕೆಶಿ, ‘ನಮಸ್ತೇ ಸದಾ ವತ್ಸಲೇ ಮಾತೃಭೂಮೇ’ ಗೀತೆ ಹಾಡಿ, “ಇದೀಗ ಅದರೆಲ್ಲ ಚರ್ಚೆ ಬೇಡ” ಎಂದು ಪ್ರತಿಕ್ರಿಯಿಸಿದರು. ಈ ಘಟನೆ ಇದೀಗ ಹೊಸ ರಾಜಕೀಯ ಸಂವೇದನೆ ಹುಟ್ಟಿಸಿದೆ.
ಕಾಮೆಂಟ್ ಬಿಡಿ