ಸಿನಿಮಾ

ಸೆರಗು ಸರ್ಸೆ ಹಾಡು ತೀವ್ರ ವಿವಾದ:ನಟಿ ನೋರಾ ಫತೇಹಿ ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ಗಂಭೀರ ಆರೋಪ

ಸೆರಗು ಸರ್ಸೆ ಹಾಡು ತೀವ್ರ ವಿವಾದ: ನಟಿ ನೋರಾ ಫತೇಹಿ ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ಗಂಭೀರ ಆರೋಪ

ಧ್ರುವ ಸರ್ಜಾ ನಟನೆಯ 'ಕೆಡಿ' ಚಿತ್ರದ 'ಸೆರಗು ಸರ್ಸೆ' ಹಾಡು ತೀವ್ರ ವಿವಾದಕ್ಕೆ ಗುರಿಯಾಗಿರುವ ಬೆನ್ನಲ್ಲೇ, ನಟಿ ನೋರಾ ಫತೇಹಿ ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, "ಹಾಡಿನ ಅಶ್ಲೀಲ ಸಾಹಿತ್ಯ ಮತ್ತು ಹಿಂದಿ ಅವತರಣಿಕೆಯ ಬಗ್ಗೆ ನನಗೆ ಮಾಹಿತಿಯೇ ಇರಲಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

​ಮೂರು ವರ್ಷಗಳ ಹಿಂದೆ ಚಿತ್ರೀಕರಣ ನಡೆದಾಗ ಇದು ಅಸಭ್ಯವಾಗಿರಲಿಲ್ಲ. ಆದರೆ ಈಗ ನನ್ನ ಅನುಮತಿ ಇಲ್ಲದೆ ದ್ವಂದ್ವಾರ್ಥದ ಸಾಹಿತ್ಯ ಸೇರಿಸಲಾಗಿದೆ ಮತ್ತು ಎಐ (AI) ತಂತ್ರಜ್ಞಾನ ಬಳಸಿ ನನ್ನ ಹಾಗೂ ಸಂಜಯ್ ದತ್ ಅವರ ಅಸಂಬಂಧ ಫೋಟೋಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಿರ್ದೇಶಕರು ನನ್ನ ಇಮೇಜ್ ಮತ್ತು ಗೌರವಕ್ಕೆ ಧಕ್ಕೆ ತಂದಿದ್ದಾರೆ" ಎಂದು ನೋರಾ ಕಿಡಿಕಾರಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದ ಚಿತ್ರತಂಡಕ್ಕೆ ನಟಿಯ ಈ ಹೇಳಿಕೆ ದೊಡ್ಡ ಹಿನ್ನಡೆ ತಂದಿದೆ.

ಕಾಮೆಂಟ್ ಬಿಡಿ

Join Us