ಕ್ರೈಂ

ಸುದೀಪ್ ರೈ ಆತ್ಮಹತ್ಯೆ ಪ್ರಕರಣಕ್ಕೀಗ ಸ್ಫೋಟಕ ತಿರುವು; ನಿಗೂಢ ಸಾವಿನ ರಹಸ್ಯ

ಮಂಗಳೂರು: ಮದುವೆಯಾದ ಒಂದೇ ತಿಂಗಳಿಗೆ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ, ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಕಾರ್ಕಳದಲ್ಲಿ ನಡೆದಿತ್ತು.  ಮದುವೆಯಾಗಿ ಕೆಲವೇ ದಿನಗಳಲ್ಲಿ ಪತ್ನಿಯ ಸರಣಿ ಮ್ಯಾರೇಜ್ ಕಹಾನಿ ಬಯಲಾಗಿತ್ತು. ಹೀಗಾಗಿ ಮದುವೆಯಾದ ಒಂದು ತಿಂಗಳ ಬಳಿಕ ತನ್ನ ತಂದೆ-ತಾಯಿ ಮನೆಗೆ ಬಂದಿದ್ದ ಸುದೀಪ್​​ ಪತ್ನಿ ಹಣ ಒಡವೆ ಕಿತ್ತುಕೊಂಡಿದ್ದಾಳೆ, ತುಂಬಾ ಟಾರ್ಚರ್ ಕೊಡುತ್ತಿದ್ದಾಳೆ ಎಂದು ಅಲವತ್ತುಕೊಂಡಿದ್ದರು ಎನ್ನಲಾಗಿದೆ.

ಸೌಮ್ಯಾಳ ನವರಂಗಿ ಆಟವೇ ಸುದೀಪ್ ಸಾವಿಗೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ.ಮದುವೆಯಾಗಿ ಕೆಲವೇ ದಿನಗಳಲ್ಲಿ ಪತ್ನಿಯ ಸರಣಿ ಮ್ಯಾರೇಜ್ ಕಹಾನಿ ಬಯಲಾಗಿತ್ತು. ಹೀಗಾಗಿ ಮದುವೆಯಾದ ಒಂದು ತಿಂಗಳ ಬಳಿಕ ತನ್ನ ತಂದೆ-ತಾಯಿ ಮನೆಗೆ ಬಂದಿದ್ದ ಸುದೀಪ್​​ ಪತ್ನಿ ಹಣ ಒಡವೆ ಕಿತ್ತುಕೊಂಡಿದ್ದಾಳೆ, ತುಂಬಾ ಟಾರ್ಚರ್ ಕೊಡುತ್ತಿದ್ದಾಳೆ ಎಂದು ಅಲವತ್ತುಕೊಂಡಿದ್ದರು ಎನ್ನಲಾಗಿದೆ.

ಮಗ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾದಾಗ ಸೌಮ್ಯಾ ಮತ್ತು ಆಕೆಯ ಕುಟುಂಬದವರು ಅಲ್ಲಿಗೆ ಬಂದಿದ್ದರು. ಆದರೆ ಮಗನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಯುತ್ತಿದ್ದಂತೆಯೇ ಸೌಮ್ಯಾ, ಆಕೆಯ ತಂದೆ ಮತ್ತು ತಮ್ಮ ಅಲ್ಲಿಂದ ಪರಾರಿಯಾಗಿದ್ದಾರೆ. ಆಸ್ಪತ್ರೆಯ ಲಕ್ಷಾಂತರ ರೂಪಾಯಿ ಬಿಲ್ ಅನ್ನು ನಾವೇ ಕಟ್ಟಿದ್ದೇವೆ, ಸೌಮ್ಯಾ ಒಂದು ರೂಪಾಯಿ ಕೂಡ ನೀಡಿಲ್ಲ ಎಂದು ದಾಮೋದರ್ ಶೆಟ್ಟಿ ದೂರಿದ್ದಾರೆ.

ಸುದೀಪ್ ಶೆಟ್ಟಿಯ ಸಾವಿನ ನಂತರವೂ ಅವರ ಬೆಲೆಬಾಳುವ ವಸ್ತುಗಳು ಪತ್ನಿ ಸೌಮ್ಯಾ ಬಳಿಯೇ ಇವೆ ಎಂಬುದು ತಂದೆಯ ಆರೋಪ. ಮಗನ ಚಿನ್ನದ ಸರ, ಆಭರಣಗಳು ಸೌಮ್ಯಾ ಬಳಿಯೇ ಇವೆ. ಅಷ್ಟೇ ಅಲ್ಲ, ಮಗನ ಕಾರನ್ನು ಕೂಡ ಆಕೆ ಬಿಟ್ಟುಕೊಡುತ್ತಿಲ್ಲ, ಕೀ ಕೊಡಲು ನಿರಾಕರಿಸುತ್ತಿದ್ದಾಳೆ. ಮಗನ ಮೊಬೈಲ್ ಕೂಡ ಆಕೆಯ ಬಳಿಯೇ ಇದೆ. ಅವಳ ತಪ್ಪಿಲ್ಲದಿದ್ದರೆ ಯಾಕೆ ಅವಳು ಇನ್ನೂ ಪೊಲೀಸ್ ಠಾಣೆಗೆ ಬಂದು ದೂರು ನೀಡಿಲ್ಲ? ಎಂದು ದಾಮೋದರ್ ಪ್ರಶ್ನಿಸಿದ್ದಾರೆ.

ನನ್ನ ಮಗನಿಗೆ ಆಕೆ ವಿಪರೀತ ಟಾರ್ಚರ್ ನೀಡುತ್ತಿದ್ದಳು. ಮಗನೇ ನಮ್ಮ ಬಳಿ ಬಂದು ಆಕೆ ನೀಡುತ್ತಿದ್ದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದ. ಇದು ಹನಿಟ್ರ್ಯಾಪ್ ಮಾದರಿಯಲ್ಲೇ ನಡೆದಿದೆ. ಸೌಮ್ಯಾ ಹಿಂದೆ ದೊಡ್ಡ ತಂಡವೇ ಇರುವ ಸಂಶಯವಿದೆ. ಇದರ ಹಿಂದೆ ಯಾರಿದ್ದಾರೆ ಅವರೆಲ್ಲರನ್ನೂ ಪತ್ತೆ ಹಚ್ಚಿ ಬಂಧಿಸಬೇಕು ಎಂಬುದು ಮೃತನ ತಂದೆಯ ಆಗ್ರಹ.

ನನ್ನ ಮಗನಿಗೆ ಆದ ಸ್ಥಿತಿ ಬೇರೆ ಯಾರಿಗೂ ಆಗಬಾರದು. ಆಕೆಗೆ ಸರಿಯಾದ ಶಿಕ್ಷೆಯಾಗಬೇಕು. ಈ ಪ್ರಕರಣದ ಆಳ-ಅಗಲ ದೊಡ್ಡದಿದ್ದು, ಇದನ್ನು ಸಿಬಿಐ (CBI) ಅಥವಾ ಎನ್​ಐಎ (NIA) ತನಿಖೆಗೆ ಒಪ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಎರಡು ಪರಸ್ಪರ ವಿರೋಧಾಭಾಸದ ಹೇಳಿಕೆಗಳು ಕಾರ್ಕಳ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ. ಸೌಮ್ಯಾ ಶೆಟ್ಟಿ ‘ನಾನು ಪ್ರೀತಿಸಿ ಮದುವೆಯಾಗಿದ್ದೆ’ ಎನ್ನುತ್ತಿದ್ದರೆ, ದಾಮೋದರ್ ಶೆಟ್ಟಿ ‘ಇದು ಹನಿಟ್ರ್ಯಾಪ್’ ಎನ್ನುತ್ತಿದ್ದಾರೆ. ಪೋಸ್ಟ್ ಮಾರ್ಟಂ ವರದಿ ಮತ್ತು ಮೊಬೈಲ್ ದಾಖಲೆಗಳು ನಿಗೂಢ ಸಾವಿನ ರಹಸ್ಯವನ್ನು ಬಿಚ್ಚಿಡಬೇಕಿದೆ.

ಕಾಮೆಂಟ್ ಬಿಡಿ

Join Us