ನಟಿ ಹರಿಪ್ರಿಯಾ, ವಸಿಷ್ಠ ಸಿಂಹ ಉಡುಪಿ ಮಠಕ್ಕೆ ಬಂದು ನೆಲದಲ್ಲಿ ಭೋಜನ
ಉಡುಪಿ : ಮಗು ಹುಟ್ಟಿದರೆ ನೆಲಭೋಜನ ಮಾಡುವುದಾಗಿ ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರು ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಈ ದಂಪತಿಗೆ ಗಂಡು ಮಗು ಜನಿಸಿತು. ಈಗ ಮಗನೊಂದಿಗೆ ಬಂದು ಶ್ರೀಕೃಷ್ಣನ ದರ್ಶನ ಪಡೆದ ಅವರು ಮುಖ್ಯಪ್ರಾಣನ ಸನ್ನಿಧಿಯಲ್ಲಿ ನೆಲಭೋಜನ ಪ್ರಸಾದ ಸ್ವೀಕರಿಸಿದ್ದಾರೆ.
ಜನಸಾಮಾನ್ಯರೊಂದಿಗೆ ಕುಳಿತು ನೆಲಭೋಜನವನ್ನು ಸ್ಟಾರ್ ದಂಪತಿ ಸ್ವೀಕರಿಸಿದರು. ಮಗನೊಂದಿಗೆ ದೇವರ ದರ್ಶನ ಮಾಡಿದ ಬಳಿಕ ಪರ್ಯಾಯ ಶೀರೂರು ಶ್ರೀ ವೇದವರ್ಧನ ಯತಿಗಳ ಆಶೀರ್ವಾದವನ್ನು ಕೂಡ ಅವರು ಪಡೆದರು.ಬಹಳ ಗ್ಯಾಪ್ ಬಳಿಕ ನಾವು ಉಡುಪಿ ಮಠಕ್ಕೆ ಬಂದು ಶ್ರೀಕೃಷ್ಣನ ದರ್ಶನ ಮಾಡಿದೆವು. ಒಂದೂವರೆ ವರ್ಷದ ಹಿಂದೆ ಬಂದು ನಾವು ನೆಲಭೋಜನದ ಹರಕೆ ಮಾಡಿಕೊಂಡಿದ್ದೆವು. ದೇವರ ಅನುಗ್ರಹ ನಮಗೆ ಸಿಕ್ಕಿದೆ ಎಂಬುದು ನಮ್ಮ ನಂಬಿಕೆ. ಎಲ್ಲ ಪದ್ಧತಿಯು ಗಟ್ಟಿ ಹಿನ್ನೆಲೆಯಲ್ಲಿ ಹುಟ್ಟಿರುತ್ತದೆ. ಅದನ್ನು ನಾವು ಪಾಲಿಸಿದ್ದೇವೆ’ ಎಂದು ವಸಿಷ್ಠ ಸಿಂಹ ಹೇಳಿದರು.
ಕಾಮೆಂಟ್ ಬಿಡಿ