ಕಾಂತಾರಾ ಬೆಡಗಿ ನಟಿ ಸಪ್ತಮಿ ಗೌಡ ನ್ಯೂ ಕೂಲ್ ಲುಕ್‌ಗೆ ಅಭಿಮಾನಿಗಳು ಫಿದಾ
ತೆಲುಗು ಸಿನಿಮಾವೊಂದರ ಬಿಡುಗಡೆ ಖುಷಿಯಲ್ಲಿರುವ ಕಾಂತಾರ ಬೆಡಗಿ ನಟಿ ಸಪ್ತಮಿ ಗೌಡರ ನಯಾ ಕೂಲ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಕಾಂತಾರಾ ಬೆಡಗಿ ನಟಿ ಸಪ್ತಮಿ ಗೌಡ ನ್ಯೂ ಕೂಲ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೌದು, ಸದ್ಯ ಮುಂಬರುವ ತಿಂಗಳಲ್ಲಿ ಬಿಡುಗಡೆಯಾಗಲಿರುವ ತೆಲುಗು ಸಿನಿಮಾವೊಂದರ ಬಿಡುಗಡೆಯ ಖುಷಿಯಲ್ಲಿರುವ ನಟಿ ಸಪ್ತಮಿ ಗೌಡ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದು, ಇವರ ಈ ಹೊಸ ಲುಕ್‌ಗೆ ಫಾಲೋವರ್ಸ್ ಫಿದಾ ಆಗಿದ್ದಾರೆ.
ಸಪ್ತಮಿ ಗೌಡ ಆಗಾಗ್ಗೆ ಬಗೆಬಗೆಯ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಕೆಲವೊಮ್ಮೆ ಎಥ್ನಿಕ್, ಇನ್ನು ಕೆಲವೊಮ್ಮೆ ಸೀರೆಯಲ್ಲಿ, ಮತ್ತೊಮ್ಮೆ ಕ್ಯಾಶುವಲ್‌ನಲ್ಲಿ ಹೀಗೆ ಲೆಕ್ಕವಿಲ್ಲದಷ್ಟು ಬಗೆಯ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡು ತಮ್ಮ ಅಭಿಮಾನಿ ಬಳಗವನ್ನು ಆಕರ್ಷಿಸುತ್ತಿರುತ್ತಾರೆ.
ಕಾಂತಾರಾ ಸಿನಿಮಾದ ನಂತರ ಮೂಗುತಿ ತೆಗೆದ ಸಪ್ತಮಿ ಗೌಡ, ಆಯಾ ಪಾತ್ರಕ್ಕೆ ತಕ್ಕಂತೆ ಬದಲಾಗಿದ್ದಾರೆ. ಅಲ್ಲದೇ, ಅವರ ಲುಕ್‌ನಲ್ಲೂ ಬದಲಾವಣೆ ತಂದಿದ್ದಾರೆ. ಇನ್ನು, ಫಿಟ್ನೆಸ್ ವಿಷಯಕ್ಕೆ ಬಂದಲ್ಲಿ, ಮೊದಲಿಗಿಂತ ತೀರಾ ಸ್ಲಿಮ್ ಆಗಿದ್ದಾರೆ. ಇದು ಅವರನ್ನು ಮತ್ತಷ್ಟು ಯಂಗ್ ಆಗಿ ಬಿಂಬಿಸುತ್ತಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಕಾಮೆಂಟ್ ಬಿಡಿ