2026- ಜೂನ್ನಲ್ಲಿ ಬ್ಯಾಂಕುಗಳಿಗೆ 12 ದಿನಗಳವರೆಗೆ ರಜೆ
ನವದೆಹಲಿ: 2026ರ ಜೂನ್ನಲ್ಲಿ ಬ್ಯಾಂಕುಗಳಿಗೆ 12 ದಿನಗಳವರೆಗೆ ರಜೆ ಇರುತ್ತದೆ. ರಾಜ್ಯದಿಂದ ರಾಜ್ಯಕ್ಕೆ ರಜೆಗಳಲ್ಲಿ ವ್ಯತ್ಯಯ ಇರುತ್ತದೆ. ಮೊಹರಂ, ಮಹಾರಾಣಾ ಪ್ರತಾಪ್ ಜಯಂತಿ, ಗುರು ಅರ್ಜುನದೇವ ಬಲಿದಾನ ದಿನ, ಕಬೀರ್ ಜಯಂತಿ ಇತ್ಯಾದಿ ಕೆಲ ವಿಶೇಷ ದಿನಗಳು ಮತ್ತು ಆಚರಣೆಗಳು ಬೇರೆ ಬೇರೆ ರಾಜ್ಯಗಳಲ್ಲಿ ಇವೆ. ಈ 12 ರಜಾದಿನಗಳಲ್ಲಿ ಆರು ದಿನಗಳು ರೆಗ್ಯುಲರ್ ವೀಕೆಂಡ್ ರಜಾ ದಿನಗಳೇ ಆಗಿವೆ. ಮಿಝೋರಾಂ, ಹಿಮಾಚಲ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ. ಬೇರೆ ರಾಜ್ಯಗಳಿಗಿಂತ ಎರಡು ಹೆಚ್ಚು ರಜೆಗಳಿವೆ. ಮೊಹರಂ ಹಬ್ಬಕ್ಕೆ ಹೆಚ್ಚಿನ ರಾಜ್ಯಗಳಲ್ಲಿ ರಜೆ ಇದೆ. ಕರ್ನಾಟಕದಲ್ಲಿ ಏಳು ದಿನ ಬ್ಯಾಂಕುಗಳು ಜೂನ್ನಲ್ಲಿ ಬಂದ್ ಆಗಿರುತ್ತವೆ.
2026ರ ಜೂನ್ನಲ್ಲಿ ಬ್ಯಾಂಕ್ ರಜಾದಿನಗಳು
ಜೂನ್ 7: ಭಾನುವಾರದ ರಜೆ
ಜೂನ್ 13: ಎರಡನೇ ಶನಿವಾರದ ರಜೆ
ಜೂನ್ 14: ಭಾನುವಾರದ ರಜೆ
ಜೂನ್ 15, ಸೋಮವಾರ: ರಾಜ ಸಂಕ್ರಾಂತಿ, ವೈಎಂಎ ದಿನ (ಒಡಿಶಾ, ಮಿಝೋರಾಂ ರಾಜ್ಯಗಳಲ್ಲಿ ರಜೆ)
ಜೂನ್ 17, ಬುಧವಾರ: ಮಹಾರಾಣ ಪ್ರತಾಪ್ ಜಯಂತಿ (ಹರ್ಯಾಣ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ರಜೆ)
ಜೂನ್ 18, ಗುರುವಾರ: ಶ್ರೀ ಗುರು ಅರ್ಜುನ ದೇವ್ ಬಲಿದಾನ ದಿನ (ಪಂಜಾಬ್ನಲ್ಲಿ ರಜೆ)
ಜೂನ್ 21: ಭಾನುವಾರದ ರಜೆ
ಜೂನ್ 26, ಶುಕ್ರವಾರ: ಮೊಹರಂ ಹಬ್ಬ (ಹೆಚ್ಚಿನ ಕಡೆ ರಜೆ)
ಜೂನ್ 27: ನಾಲ್ಕನೇ ಶನಿವಾರದ ರಜೆ
ಜೂನ್ 28: ಭಾನುವಾರದ ರಜೆ
ಜೂನ್ 29, ಸೋಮವಾರ: ಸಂತ ಗುರು ಕಬೀರ್ ಜಯಂತಿ (ಹಿಮಾಚಲ ಪ್ರದೇಶದಲ್ಲಿ ರಜೆ)
ಜೂನ್ 30, ಮಂಗಳವಾರ: ರೆಮ್ನಾ ನೀ (ಮಿಝೋರಾಂ ರಾಜ್ಯದಲ್ಲಿ ರಜೆ)
ಕರ್ನಾಟಕದಲ್ಲಿ ಜೂನ್ನಲ್ಲಿರುವ ಬ್ಯಾಂಕ್ ರಜಾದಿನಗಳು
ಜೂನ್ 7: ಭಾನುವಾರದ ರಜೆ
ಜೂನ್ 13: ಎರಡನೇ ಶನಿವಾರದ ರಜೆ
ಜೂನ್ 14: ಭಾನುವಾರದ ರಜೆ
ಜೂನ್ 21: ಭಾನುವಾರದ ರಜೆ
ಜೂನ್ 26, ಶುಕ್ರವಾರ: ಮೊಹರಂ ಹಬ್ಬಕ್ಕೆ ರಜೆ
ಜೂನ್ 27: ನಾಲ್ಕನೇ ಶನಿವಾರದ ರಜೆ
ಜೂನ್ 28: ಭಾನುವಾರದ ರಜೆ
ಬ್ಯಾಂಕುಗಳಿಗೆ ರಜೆ ಎಂದರೆ ಕಚೇರಿ ಮಾತ್ರವೇ ಬಂದ್ ಆಗಿರುತ್ತದೆ. ಆದರೆ, ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ಆನ್ಲೈನ್ನಲ್ಲಿ ಲಭ್ಯ ಇರುತ್ತವೆ. ಆರ್ಟಿಜಿಎಸ್ ಪೇಮೆಂಟ್, ಹೊಸ ಬ್ಯಾಂಕ್ ಖಾತೆಗೆ ಅರ್ಜಿ ಸಲ್ಲಿಕೆ ಇತ್ಯಾದಿ ಕಾರ್ಯಕ್ಕೆ ಭೌತಿಕ ಕಚೇರಿ ಬೇಕು. ಉಳಿದಂತೆ, ಹೆಚ್ಚಿನ ಪೇಮೆಂಟ್ಗಳನ್ನು ಯುಪಿಐ, ನೆಟ್ಬ್ಯಾಂಕಿಂಗ್ ಇತ್ಯಾದಿ ಮೂಲಕ ಮಾಡಬಹುದು. ಕ್ಯಾಷ್ ಪಡೆಯಲು ಎಟಿಎಂಗಳು ಕೂಡ 24 ಗಂಟೆ ಲಭ್ಯ ಇರುತ್ತವೆ.
ಕಾಮೆಂಟ್ ಬಿಡಿ