ವಾಣಿಜ್ಯ

ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಮತ್ತೆ ಏರಿಕೆ

ನವದೆಹಲಿ: ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ ದೇಶದಲ್ಲಿ ಮತ್ತೆ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. 19 ಕೆಜಿ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 42 ರೂ. ಹೆಚ್ಚಳವಾಗಿದೆ.

ಪರಿಷ್ಕೃತ ದರ ಇಂದಿನಿಂದಲೇ ಅಸ್ತಿತ್ವಕ್ಕೆ ಬಂದಿದೆ. ಈ ಪರಿಷ್ಕರಣೆಯೊಂದಿಗೆ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ರಿಟೇಲ್ ದರ 3,113.50 ರೂ.ಗೆ ಏರಿಕೆಯಾಗಿದೆ. ಹೋಟೆಲ್, ರೆಸ್ಟೋರೆಂಟ್ ಮತ್ತು ಉದ್ಯಮಗಳಿಗೆ ಈ ದರ ಏರಿಕೆ ಇನ್ನಷ್ಟು ಆರ್ಥಿಕ ಹೊರೆಯಾಗಿ ಪರಿಣಮಿಸಲಿದೆ.

ಸದ್ಯ ಕೋಲ್ಕತ್ತಾದಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ ಬರೋಬ್ಬರಿ 53.50 ರೂ. ಹೆಚ್ಚಳವಾಗಿದ್ದು, 3,255.50 ಕ್ಕೆ ತಲುಪಿದೆ. ಇದರೊಂದಿಗೆ, 5 ಕೆಜಿ ತೂಕದ ಫ್ರೀ ಟ್ರೇಡ್ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನೂ ಸಹ 11 ರೂ.ನಷ್ಟು ಹೆಚ್ಚಿಸಲಾಗಿದ್ದು, ದೆಹಲಿಯಲ್ಲಿ ಇದರ ನೂತನ ದರ 821.50 ರೂ. ಆಗಿದೆ

ಆದರೆ, ಸಾಮಾನ್ಯ ಜನರು ಬಳಸುವ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಬೆಂಗಳೂರಿನಲ್ಲಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್ ದರ 46 ರೂ. ಏರಿಕೆಯಾಗಿ, 3,198 ರೂ.ಗೆ ತಲುಪಿದೆ. ಕಳೆದ ತಿಂಗಳು ಕಮರ್ಷಿಯಲ್ ಸಿಲಿಂಡರ್ ದರ 991 ರೂ. ಏರಿಕೆ ಆಗಿ 3,152 ರೂ. ಆಗಿತ್ತು.

ಕಾಮೆಂಟ್ ಬಿಡಿ

Join Us