ದೇಶ

ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ, ಟಿವಿಕೆಗೆ ಷಣ್ಮುಗಂ ನೇತೃತ್ವದ 30 ಶಾಸಕರ ಬೆಂಬಲ

ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಅಣ್ಣಾ ಡಿಎಂಕೆ ಪಕ್ಷವು ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ಇಬ್ಭಾಗವಾಗಿದೆ. ಸಿ.ವಿ. ಷಣ್ಮುಗಂ ನೇತೃತ್ವದ 30 ಶಾಸಕರ ಬಣವು ಮುಖ್ಯಮಂತ್ರಿ ವಿಜಯ್​ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ಘೋಷಿಸಿದೆ. ಅಣ್ಣಾ ಡಿಎಂಕೆ ಸ್ಥಾಪನಾ ತತ್ವಗಳಿಗೆ ವಿರುದ್ಧವಾಗಿ, ಎಡಪ್ಪಾಡಿ ಪಳನಿಸ್ವಾಮಿ ಅವರು ಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದರು ಎಂಬ ಆರೋಪವೇ ಈ ಬಂಡಾಯಕ್ಕೆ ಮುಖ್ಯ ಕಾರಣ. ಡಿಎಂಕೆಯನ್ನು ಸೈದ್ಧಾಂತಿಕ ವಿರೋಧಿ ಎಂದು ಪರಿಗಣಿಸುವ ಷಣ್ಮುಗಂ ಬಣ, ಜನಾಭಿಪ್ರಾಯವು ಸಿಎಂ ವಿಜಯ್​ ಅವರ ಪರವಾಗಿದೆ ಎಂದು ಹೇಳಿದೆ. ಈ ಬೆಂಬಲದಿಂದ ವಿಜಯ್​ ಸರ್ಕಾರದ ಬಲವು 150 ಶಾಸಕರಿಗಿಂತ ಹೆಚ್ಚಾಗಲಿದೆ. ಈ ನಡುವೆ ಪಳನಿಸ್ವಾಮಿ ನೇತೃತ್ವದಲ್ಲಿ ಕೇವಲ 17 ಶಾಸಕರು ಮಾತ್ರ ಉಳಿದಿದ್ದಾರೆ. ಅಣ್ಣಾ ಡಿಎಂಕೆ ಮುಂದಿನ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಷಣ್ಮುಗಂ ಬಣ ಸ್ಪಷ್ಟಪಡಿಸಿದೆ.

ಕಾಮೆಂಟ್ ಬಿಡಿ

Join Us