ಕಂಬಳಾಭಿಮಾನಿಗಳ ಶೇಕ್ ಹ್ಯಾಂಡ್ ಕೊಡುವ ಕೋಣ ಚಿಂಕ್ರ ವಿಧಿವಶ
ಮೂಡಬಿದಿರೆ: ಕಂಬಳ ಕೂಟದಲ್ಲಿ ಶೇಕ್ ಹ್ಯಾಂಡ್ ಕೊಡುವ ಕೋಣ ಎಂದೇ ಪ್ರಸಿದ್ದಿ ಪಡೆದಿದ್ದ ಬೆಳುವಾಯಿ ಪೇರೋಡಿ ಪುತ್ತಿಗೆ ಗುತ್ತಿನ ಕೋಣ ಚಿಂಕ್ರ ಜ್ವರದಿಂದ ಅಕಾಲಿಕ ಮರಣವನ್ನು ಹೊಂದಿದ್ದಾನೆ.
ಎಲ್ಲರ ಜೊತೆ ಮೃದು ಸ್ವಭಾವದಿಂದ ತಲೆ ಅಲ್ಲಾಡಿಸುತ್ತಾ ಸೌಮ್ಯ ಸ್ವಭಾವದಿಂದ ಇದ್ದ ಚಿಂಕ್ರ ಮುಕ್ಕಾಲು ಇಳಿಜಾರಿನ ಕಂಬಳವೋ, ಕದನದ ತಾರಸುಮಟ್ಟದ ಓಟವೋ, ಚಿಂಕ್ರ ಎಂದರೆ ತನ್ನದೇ ಆದ ಛಾವು ಇಟ್ಟ ಕೋಣ.
ಬೆಳುವಾಯಿ ಪುತ್ತಿಗೆ ಪೆರೋಡಿ ಗುತ್ತು ಕೌಶಿಕ್ ದಿನಕರ್ ಬಿ. ಶೆಟ್ರ್ ಚಿಂಕ್ರ, ಕಳೆದ ಮುಲ್ಕಿ ಕಂಬಳದಲ್ಲಿ ಗೆಲುವಿನ ನಗೆ ಬೀರಿದ್ದ. ನಂತರ ಹಗ್ಗ ಕಿರಿಯ ವಿಭಾಗದಲ್ಲಿ ಕೆಲವು ಬಹುಮಾನ ಪಡೆದು ಕಂಬಳಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದ್ದ. ಇದೀಗ ಇಂತಹ ಅಪರೂಪದಲ್ಲಿ ಅಪರೂಪವಾದ ಶೇಕ್ ಹ್ಯಾಂಡ್ ಕೊಡುವ ಕೋಣ ಎಂದೇ ಪ್ರಸಿದ್ಧಿ ಪಡೆದಿರುವ ಚಿಂಕ್ರನ ಅಗಲಿಕೆ ಕಂಬಳಾಭಿಮಾನಿಗಳಲ್ಲಿ ಅತೀವ ನೋವುಂಟು ಮಾಡಿದೆ.
ಕಾಮೆಂಟ್ ಬಿಡಿ