ಕ್ರೈಂ

8 ವರ್ಷಗಳ ಸಂಬಂಧ.. ಈಗ ಇನ್ಸ್‌ಪೆಕ್ಟರ್ ಗೆ ಮಗಳ ಮೇಲೆ ಕಣ್ಣು

ಮೂಡುಬಿದಿರೆ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮೂಡುಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಮತ್ತಷ್ಟು ಕಾಮಪುರಾಣ ಬಯಲು ಮಾಡುವ ಇನ್ನೊಂದು ಆಡಿಯೋ ಮತ್ತು ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ. 

ವೈರಲ್ ಆದ ಆಡಿಯೋದಲ್ಲಿ ಸಂತ್ರಸ್ತೆ ಮಹಿಳೆ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಸಿಡಿದೆದ್ದಿದ್ದಾರೆ. ಸುಮಾರು 8 ವರ್ಷಗಳಿಂದ ತನಗೆ ಅನೈತಿಕ ಸಂಬಂಧಕ್ಕಾಗಿ ಪೀಡಿಸುತ್ತಿದ್ದ ಇನ್ಸ್‌ಪೆಕ್ಟರ್, ಈಗ ತನ್ನ ಮಗಳ ಮೇಲೂ ಕಣ್ಣು ಹಾಕಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ. “ಎಂಟು ವರ್ಷ ನಿನ್ನನ್ನು ಸಹಿಸಿಕೊಂಡೆ, ಆದರೆ ನನ್ನ ಮಗಳ ಮೇಲೆ ಕಣ್ಣು ಹಾಕಿದ್ದು ಸರಿಯಲ್ಲ. ನೀನು ಅವಳ ತಂಟೆಗೆ ಬಂದರೆ ನಿನ್ನನ್ನು ಬಿಡುವುದಿಲ್ಲ, ಒಂದು ಗತಿ ಕಾಣಿಸುತ್ತೇನೆ” ಎಂದು ಮಹಿಳೆ ಆಡಿಯೋದಲ್ಲಿ ಎಚ್ಚರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಂದೇಶ್, “ತಾಯಿಗೆ ಮಾಡಿದ ಮೇಲೆ ಮಗಳಿಗೂ ಮಾಡಬೇಕಲ್ಲ” ಎಂಬ ನೀಚ ಮಾತುಗಳನ್ನಾಡಿರುವುದು ಆಡಿಯೋದಲ್ಲಿ ಸೆರೆಯಾಗಿದೆ. 

ಈ ನಡುವೆ ಇನ್ನೊಂದು ಆರೋಪವೂ ಕೇಳಿ ಬಂದಿದೆ. ಈ ಇನ್ಸ್‌ಪೆಕ್ಟರ್ ಕಾಮಾಂಧತೆಯ ಸಿಸಿಟಿವಿ ದೃಶ್ಯವೊಂದು ಕೂಡ ಲಭ್ಯವಾಗಿದೆ. ರಾತ್ರಿ ವೇಳೆ ಗಸ್ತು ತಿರುಗುವ ವೇಷದಲ್ಲಿ, ಒಬ್ಬಂಟಿ ಮಹಿಳೆಯರ ಮನೆಯ ಕಾಂಪೌಂಡ್ ಹಾರಿ ಅಕ್ರಮವಾಗಿ ಪ್ರವೇಶಿಸುವ ದೃಶ್ಯ ಅದಾಗಿದೆ. ಆ ಮಹಿಳೆಯ ಪತಿ ದುಬೈನಲ್ಲಿದ್ದು, ಈ ಅವಕಾಶವನ್ನು ಬಳಸಿಕೊಂಡು ಸಂದೇಶ್ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ. 

ಈಗಾಗಲೇ ಹಲವಾರು ಮಹಿಳೆಯರು ಈತನ ವಿರುದ್ಧ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸಂತ್ರಸ್ತೆ ಮಹಿಳೆ ಮಾತನಾಡಿ, “ನನ್ನ ಮಗಳನ್ನು ಮುಟ್ಟಿದರೆ ನಿನ್ನ ಬೆನ್ನು ಮುರಿದು ಹಾಕುತ್ತೇನೆ. ನಾನು ಕಮಿಷನರ್‌ಗೆ ಎಲ್ಲವನ್ನೂ ತಿಳಿಸುತ್ತೇನೆ. 8 ವರ್ಷ ನಿನ್ನ ಜೊತೆಗಿದ್ದೆ, ನಿನ್ನ ಬದುಕು ಹಾಳಾಗಬಾರದು ಎಂದು ಸುಮ್ಮನಿದ್ದೆ. ಆದರೆ ಈಗ ನನ್ನ ಮಗಳ ತಂಟೆಗೆ ಬಂದಿದ್ದೀಯಲ್ಲ, ಇದು ನನ್ನ ಫೈನಲ್ ವಾರ್ನಿಂಗ್” ಎಂದು ಆಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್ ಬಿಡಿ

Join Us