ಕ್ರೈಂ

ವಿವಾಹಿತ ಮಹಿಳೆ ಸೇತುವೆ ಬಳಿ ಸ್ಕೂಟಿಯಲ್ಲಿ ಡೆತ್ ನೋಟ್ ಬರೆದಿಟ್ಟು ನಾಪತ್ತೆ

ಕುಂದಾಪುರ: ಕುಂದಾಪುರದಲ್ಲಿ ವಿವಾಹಿತ ಮುಸ್ಲಿಂ ಮಹಿಳೆಯೊಬ್ಬರು ನಾಪತ್ತೆಯಾಗಿದ್ದು, ಚರ್ಚ್ ರೋಡ್ ಯಿಂದ ಕೋಡಿಗೆ ಹೋಗುವ ಸೇತುವೆ ಬಳಿ ಈಕೆಯ ಸ್ಕೂಟರ್ ಹಾಗೂ ಚಪ್ಪಲಿ ಪತ್ತೆ ಯಾಗಿದೆ.

ನಾಪತ್ತೆಯಾದ ಮಹಿಳೆ ಕುಂದಾಪುರ ವಿಠಲವಾಡಿ ಮೂಲದ ಹೀನಾ ಕೌಷರ್ (33) ಎಂದು ತಿಳಿದು ಬಂದಿದೆ.ಇವರ ಪತಿ ವಿದೇಶದಲ್ಲಿದ್ದು ಎರಡು ಮಕ್ಕಳು ಹಾಗೂ ತಾಯಿಯೊಂದಿಗೆ ಕುಂದಾಪುರ ವಿಠಲವಾಡಿಯಲ್ಲಿ ವಾಸಿಸುತ್ತಿದ್ದರು. ಸೋಮವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ಕುಂದಾಪುರ ಚರ್ಚ್ ರೋಡ್ ಯಿಂದ ಕೋಡಿಗೆ ಹೋಗುವ ಸೇತುವೆ ಬಳಿ ಈಕೆಯ ಸ್ಕೂಟರ್ ಹಾಗೂ ಚಪ್ಪಲಿ ಪತ್ತೆ ಯಾಗಿದೆ. ಹೀನಾ ಅವರ ತಾಯಿ ಸಾದಿಕಾ ಬಾನು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಾಗುತ್ತಿದ್ದಂತೆ ಕುಂದಾಪುರ ಪೊಲೀಸರ ನೇತೃತ್ವದಲ್ಲಿ ಅಗ್ನಿ ಶಾಮಕ ದಳದ ಸಿಬಂದಿಯಿಂದ ಹಗಲಿಡೀ ನದಿಯಲ್ಲಿ ದೋಣಿಯ ಮೂಲಕ ಹುಡುಕಾಟ ನಡೆಯಿತು. ಆದರೆ ಯಾವುದೇ ಸುಳಿವು ಪತ್ತೆಯಾಗಿಲ್ಲ. 

ಕಾಮೆಂಟ್ ಬಿಡಿ

Join Us