ಕ್ರೈಂ

ಬಿಜೆಪಿ ನಾಯಕನ ವರ್ತನೆಗೆ ಛೀ ಥೂ ಎಂದು ಉಗಿಯುತ್ತಿದ್ದಾರೆ ಜನ ಸಾಮಾನ್ಯರು

ಲಖನೌ: ಉತ್ತರ ಪ್ರದೇಶದ ಬಿಜೆಪಿ ನಾಯಕ ಬಬ್ಬನ್‌ ಸಿಂಗ್‌ ರಘುವಂಶಿ  ಮಹಿಳೆಯೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದು, ಸದ್ಯ ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌  ಆಗಿದೆ. 70 ವರ್ಷದ ಬಿಜೆಪಿ ನಾಯಕ ಬಬ್ಬನ್‌ ನರ್ತಕಿಯೊಬ್ಬಳನ್ನು ತೊಡೆ ಮೇಲೆ ಕೂರಿಸಿಕೊಂಡು ಆಕೆಯ ಎದೆಯನ್ನು ಸ್ಪರ್ಶಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಮಾತ್ರವಲ್ಲ ಸುತ್ತಲೂ ಜನ ನೆರೆದಿದ್ದರೂ ಆಕೆಯನ್ನು ಚುಂಬಿಸಿದ್ದಾರೆ. ಸದ್ಯ ಈ ವಿಡಿಯೊ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ನಾಯಕನ ವರ್ತನೆಗೆ ಜನ ಸಾಮಾನ್ಯರು ಛೀ ಥೂ ಎಂದು ಉಗಿಯುತ್ತಿದ್ದಾರೆ. ಅಲ್ಲದೆ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.

ಬಬ್ಬನ್ ಸಿಂಗ್ ರಘುವಂಶಿ ಆರ್ಕೆಸ್ಟ್ರಾ ಹುಡುಗಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಈ ವಿಡಿಯೊವನ್ನು ಸಮಾಜವಾದಿ ಪಕ್ಷದ ನಾಯಕ ಪಂಕಜ್ ರಾಜ್‌ಭರ್ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ಬಬ್ಬನ್‌ ಸಿಂಗ್‌ ಈ ಅರೋಪವನ್ನು ನಿರಾಕರಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?
ಮದುವೆ ಸಮಾರಂಭವೊಂದರಲ್ಲಿ ಇತ್ತೀಚೆಗೆ ಬಬ್ಬನ್‌ ಸಿಂಗ್‌ ಭಾಗವಹಿಸಿದ್ದರು. ಕುರ್ಜಿಯೊಂದರಲ್ಲಿ ಕುಳಿತಿದ್ದ ಅವರ ತೊಡೆ ಮೇಲೆ ಡ್ಯಾನ್ಸರ್‌ ಒಬ್ಬಳು ಕುಳಿತು ಅಶ್ಲೀಲವಾಗಿ ವರ್ತಿಸಿದ್ದಾಳೆ. ಎಲ್ಲರೂ ನೋಡುತ್ತಿದ್ದಂತೆ ಬಬ್ಬರ್‌ ಸಿಂಗ್‌ ತಾನೇನೂ ಕಡಿಮೆ ಇಲ್ಲ ಎನ್ನುವಂತೆ ಆಕೆಯನ್ನು ಎದೆಯನ್ನೆಲ್ಲ ಸ್ಪರ್ಶಿಸಿದ್ದಲ್ಲದೆ ಎಲ್ಲರೂ ನೋಡುತ್ತಿದ್ದಂತೆಗೆ ಆಕೆಗೆ ಚುಂಬಿಸಿ ಅನುಚಿತವಾಗಿ ವರ್ತಿಸಿದ್ದಾರೆ. ಅದಾಗ್ಯೂ ಅವರು ಇದು ನಕಲಿ ವಿಡಿಯೊ, ತಮ್ಮ ಮಾನಹಾನಿ ಮಾಡುವ ಉದ್ದೇಶದಿಂದ ಇದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಯಬಿಡಲಾಗುತ್ತಿದೆ ಎಂದು ಸಮರ್ಥನೆಯನ್ನೂ ನೀಡಿದ್ದಾರೆ.

ಕಾಮೆಂಟ್ ಬಿಡಿ

Join Us