2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅನ್ನು ಗೆದ್ದುಕೊಂಡಿತು ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾ ತಂಡ 27 ವರ್ಷಗಳ ಬಳಿಕ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅನ್ನು ಮುಡಿಗೇರಿಸಿಕೊಂಡಿತು.
ಲಂಡನ್‌ನ ಲಾರ್ಡ್ಸ್ ಅಂಗಣದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅನ್ನು ಗೆದ್ದುಕೊಂಡಿತು. ಏಡೆನ್ ಮಾರ್ಕ್ರಾಮ್ ಅದ್ಭುತ ಶತಕ ಗಳಿಸಿದರು ಮತ್ತು ತೆಂಬಾ ಬವುಮಾ ಅರ್ಧಶತಕ ಗಳಿಸಿದರು. ಚಾಂಪಿಯನ್ ಆದ ದಕ್ಷಿಣ ಆಫ್ರಿಕಾ 31.05 ಕೋಟಿ ರೂ. ನಗದು ಬಹುಮಾನ ಪಡೆದುಕೊಂಡಿದೆ. ರನ್ನರ್ ಅಪ್ ಆಸ್ಟ್ರೇಲಿಯಾ 18.63 ಕೋಟಿ ರೂ. ಪಡೆದುಕೊಂಡಿದೆ.
ಟೆಸ್ಟ್ ಚಾಂಪಿಯನ್‌ಷಿಪ್‌ನ ನಗದು ಬಹುಮಾನದ ವಿವರ
ಚಾಂಪಿಯನ್ ದಕ್ಷಿಣ ಆಫ್ರಿಕಾ: 31.05 ಕೋಟಿ ರು
- ರನ್ನರ್ ಅಪ್ ಆಸ್ಟ್ರೇಲಿಯಾ: 18.63 ಕೋಟಿ ರು
- ಭಾರತ (ಮೂರನೇ ಸ್ಥಾನ): 12.42 ಕೋಟಿ ರು
- ನ್ಯೂಜಿಲೆಂಡ್ (ನಾಲ್ಕನೇ ಸ್ಥಾನ): 10.35 ಕೋಟಿ ರು
- ಇಂಗ್ಲೆಂಡ್ (ಐದನೇ ಸ್ಥಾನ) 8.28 ಕೋಟಿ ರು
- ಶ್ರೀಲಂಕಾ (ಆರನೇ ಸ್ಥಾನ): 7.24 ಕೋಟಿ ರು
- ಬಾಂಗ್ಲಾದೇಶ (ಏಳನೇ ಸ್ಥಾನ): 6.21 ಕೋಟಿ ರು
- ವೆಸ್ಟ್ ಇಂಡೀಸ್ (ಎಂಟನೇ ಸ್ಥಾನ): 5.17 ಕೋಟಿ ರು
- ಪಾಕಿಸ್ತಾನ (ಒಂಬತ್ತನೇ ಸ್ಥಾನ): 4.14 ಕೋಟಿ ರು
ಕಾಮೆಂಟ್ ಬಿಡಿ