ದಕ್ಷಿಣ ಕನ್ನಡ: ಸಕಲೇಶಪುರ ಅರಣ್ಯ ವಲಯದ ಮಾರನಹಳ್ಳಿ ಶಾಖೆಯ ಕೆಂಪುಹೊಳೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಆನೆಮರಿಯ ಕಳೇಬರ ಪತ್ತೆಯಾಗಿದೆ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗಡಿ ದೇವಸ್ಥಾನದ ಹಿಂಭಾಗದ 200 ಮೀಟರ್ ದೂರದ ಗುಂಡ್ಯ ಹೊಳೆ ಪಕ್ಕದಲ್ಲಿ ಸುಮಾರು 5 ತಿಂಗಳ ಗಂಡು ಮರಿ ಆನೆಯ ಕಳೇಬರ ಪತ್ತೆಯಾಗಿದೆ.ತಾಯಿ ಆನೆಯೊಂದಿಗೆ ಮರಿಯಾನೆ ಆಹಾರ ಹುಡುಕುತ್ತ ಬರುವಾಗ ಮೇಲಿನಿಂದ ಜಾರಿ ನದಿಗೆ ಬಿದ್ದಿರಬಹುದು ಅಥವಾ ಹಳ್ಳ ದಾಟುವಾಗ ನೀರಿನೊಂದಿಗೆ ಕೊಚ್ಚಿಕೊಂಡು ಹೋಗಿ ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ.
- ನ್ಯೂಸ್ ಬ್ಯೂರೋ true news ಕನ್ನಡ