“ಮೌಲಾನ ಮೋದಿ, ಶೇಮ್‌ಆನ್‌ ಬಿಜೆಪಿ” ಬಲಪಂಥೀಯರ ಅಭಿಯಾನ..!?

ನವದೆಹಲಿಪ್ರವಾದಿ ಮೊಹಮ್ಮದ್ ವಿರುದ್ಧ ಭಾರತೀಯ ಜನತಾ ಪಕ್ಷದ ವಕ್ತಾರೆ ನೂಪುರ್ ಶರ್ಮಾ ಮತ್ತು ದೆಹಲಿ ಬಿಜೆಪಿ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಮಾಡಿದ ನಿಂದನೆಗಳನ್ನು ಹಲವಾರು ಗಲ್ಫ್ ರಾಷ್ಟ್ರಗಳು ಖಂಡಿಸಿದ ಬೆನ್ನಲ್ಲೇ, ಸೋಮವಾರ ಜಗತ್ತಿನ ಇನ್ನಿತರ ದೇಶಗಳು ಕೂಡಾ ಪ್ರವಾದಿ ವಿರುದ್ಧದ ನಿಂದನೆಯನ್ನು ಕಟುವಾಗಿ ಪ್ರಶ್ನಿಸಿದೆ.

ಪಕ್ಷವು “ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ” ಮತ್ತು “ಯಾವುದೇ ಪಂಥ ಅಥವಾ ಧರ್ಮವನ್ನು ಅವಮಾನಿಸುವ ಅಥವಾ ಅವಮಾನಿಸುವ ಯಾವುದೇ ಸಿದ್ಧಾಂತವನ್ನು ಬಲವಾಗಿ ವಿರೋಧಿಸುತ್ತದೆ” ಎಂದು ಹೇಳುವ ಮೂಲಕ ಬಿಜೆಪಿಯು ಶರ್ಮಾ ಮತ್ತು ಜಿಂದಾಲ್ ಅವರನ್ನು ಉಚ್ಚಾಟಿಸಿದೆ.

ನೂಪುರ್‌ ಶರ್ಮಾ ಅವರನ್ನು ಪಕ್ಷದಿಂದ ವಜಾಗೊಳಿಸಿದ ಕುರಿತಂತೆ ಹಿಂದುತ್ವವಾದಿಗಳು ಹಾಗೂ ಬಲಪಂಥೀಯರು ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ. #ModiShamesIndia #ShameOnBJP ಮೊದಲಾದ ಹ್ಯಾಷ್‌ಟ್ಯಾಗ್‌ ಗಳು ಟ್ವಿಟರಿನಲ್ಲಿ ಟ್ರೆಂಡ್‌ ಆಗಿದ್ದು, ಪ್ರವಾದಿ ನಿಂದನೆ ಮಾಡಿರುವ ನೂಪುರ್‌ ಶರ್ಮಾಳಿಗೆ ಬೆಂಬಲಿಸಿ ಹಲವಾರು ಬಲಪಂಥೀಯರು ಅಭಿಯಾನ ನಡೆಸಿದ್ದಾರೆ. ವಿದೇಶಿ ರಾಜ್ಯಗಳ ಒತ್ತಡಕ್ಕೆ ಮಣಿದು ನೂಪುರ್‌ ರನ್ನು ಉಚ್ಛಾಟಿಸಿರುವುದು ಬೆಂಬಲಿಗರಿಗೆ ನುಂಗಲಾರದ ತುತ್ತಾಗಿವೆ.

  • ಪೊಲಿಟಿಕಲ್ ಬ್ಯೂರೋ true news ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.