ಚೆನ್ನೈ: ಭಾರತದ ತಂಡದ ಮಾಜಿ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರು ಭಾರತದ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಇರುವ ಫೋಟೋ ಶನಿವಾರ ಅಂತರ್ಜಾಲದಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಈಗ ನೆಟಿಜನ್ ಗಳ ಧೋನಿ ರಾಜಕೀಯಕ್ಕೆ ಧುಮುಕುತ್ತಾರೆಯೇ? ಎನ್ನುವ ಸಂದೇಹ ವ್ಯಕ್ತಪಡಿಸಿದ್ದಾರೆ.

ಈಗ ವೈರಲ್ ಆಗಿರುವ ಈ ಫೋಟೋದಲ್ಲಿ ಧೋನಿ ಅಮಿತ್ ಶಾ ಜೊತೆ ಕೈಕುಲುಕುತ್ತಿರುವುದನ್ನು ಕಾಣಬಹುದು.ಆದರೆ ವಾಸ್ತವದ ಸಂಗತಿ ಏನೆಂದರೆ ಇದು ಇಂಡಿಯಾ ಸಿಮೆಂಟ್ಸ್‌ನ 75 ನೇ ವಾರ್ಷಿಕೋತ್ಸವದ ಕಾರ್ಯಕ್ರಮವಾಗಿದ್ದು,ಇದರಲ್ಲಿ ಇಬ್ಬರು ಅತಿಥಿಯಾಗಿ ಭಾಗವಹಿಸಿದ್ದಾರೆ. ಇದು ಮಾಜಿ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಒಡೆತನದ ಕಂಪನಿಯಾಗಿದೆ, ಅವರು ಐಪಿಎಲ್‌ನ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸಹ ಹೊಂದಿದ್ದಾರೆ.
MS Dhoni meets India's Home Minister, Amit Shah. pic.twitter.com/aVqeaJZTvP
— Mufaddal Vohra (@mufaddal_vohra) November 12, 2022
ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರು ಧೋನಿ ಮತ್ತು ಶಾ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಪಾಲ್ಗೊಳ್ಳಲು ಷಾ ನವದೆಹಲಿಯಿಂದ ಚೆನ್ನೈಗೆ ಖಾಸಗಿಯಾಗಿ ವಿಮಾನದಲ್ಲಿ ತೆರಳಿದರು. ಬಿಜೆಪಿಯ ರಾಜ್ಯಾಧ್ಯಕ್ಷ ಎಲ್.ಮುರುಗನ್ ಮತ್ತು ಬಿಜೆಪಿಯ ಇತರ ಪ್ರಮುಖ ನಾಯಕರು ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.