ಆಟೊ ಚಾಲಕ ಅನೂಪ್‌ ಗೆ 25 ಕೋಟಿ ಓಣಂ ಬಂಪರ್...!?

 ಕೇರಳ : ಈ ವರ್ಷವಷ್ಟೇ ಓಣಂ ಲಾಟರಿಯ ಬಂಪರ್‌ ಬಹುಮಾನದ ಮೊತ್ತವನ್ನು ₹ 25 ಕೋಟಿಗೆ ಹೆಚ್ಚಿಸಲಾಗಿದೆ. ಪ್ರತಿ ಟಿಕೆಟ್‌ ದರ ₹ 500 ಇದ್ದು, ದಾಖಲೆಯ 66.5 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು. ಕಳೆದ ವರ್ಷದ ಓಣಂ ಬಂಪರ್‌ ಲಾಟರಿಯ ಬಹುಮಾನದ ಮೊತ್ತ ₹ 12 ಕೋಟಿ ಇತ್ತು. ಆ ಬಹುಮಾನ ಸಹ ಕೊಚ್ಚಿಯ ಆಟೊ ಚಾಲಕ ಜಯಪಾಲನ್‌ ಎಂಬುವವರ ಪಾಲಾಗಿತ್ತು. ಈ ಬಾರಿಯ ಓಣಂ ಬಂಪರ್ ಲಾಟರಿ ಆಟೊ ಚಾಲಕ ಅನೂಪ್‌ ಅವರಿಗೆ ಪ್ರಥಮ ಬಹುಮಾನ ₹ 25 ಕೋಟಿ ಲಭಿಸಿದೆ.

ಕೇರಳದ ಓಣಂ ಲಾಟರಿ ಮತ್ತೆ ಆಟೋ ರಿಕ್ಷಾ ಚಾಲಕನಿಗೆ ಒಲಿದು ಬಂದಿದ್ದು, ಈ ಬಾರಿಯ ಓಣಂ ಬಂಪರ್ ಲಾಟರಿ ಆಟೊ ಚಾಲಕ ಅನೂಪ್‌ ಅವರಿಗೆ ಪ್ರಥಮ ಬಹುಮಾನ ₹ 25 ಕೋಟಿ ಲಭಿಸಿದೆ.​​​​​​​ ಶನಿವಾರ ಅವರು ಲಾಟರಿ ಟಿಕೆಟ್‌ (ಟಿಜೆ750605) ಖರೀದಿಸಿದ್ದರು. ತೆರಿಗೆ ಹಾಗೂ ಕಮಿಷನ್‌ ಕಳೆದು ಅವರಿಗೆ ₹ 15.75 ಕೋಟಿ ಸಿಗಲಿದೆ. ಈ ಬಂಪರ್‌ ಬಹುಮಾನ ತಂದಿರುವ ಟಿಕೆಟ್ಅನ್ನು ಮಾರಾಟ ಮಾಡಿರುವ ತಿರುವನಂತಪುರದ ಭಗವತಿ ಏಜೆನ್ಸಿಗೆ ಕಮಿಷನ್‌ ರೂಪದಲ್ಲಿ ₹ 2.5 ಕೋಟಿ ಸಿಗಲಿದೆ. ಅನೂಪ್‌ ಅವರು ಆಟೊ ಚಾಲಕರಾಗಿರುವ ಜೊತೆಗೆ ಬಾಣಸಿಗರೂ ಹೌದು. ಬಾಣಸಿಗನಾಗಿ ಒಳ್ಳೆಯ ಉದ್ಯೋಗ ಅರಸಿ ಮಲೇಷ್ಯಾಕ್ಕೆ ಹೋಗಲು ಯೋಜಿಸಿದ್ದರು. ಬೃಹತ್‌ ಮೊತ್ತದ ಲಾಟರಿ ಬಹುಮಾನ ಸಿಕ್ಕಿರುವ ಕಾರಣ ವಿದೇಶಕ್ಕೆ ಹಾರುವ ಯೋಚನೆಯನ್ನು ಕೈಬಿಟ್ಟಿದ್ದಾರೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.