ಕನ್ನಡದ ಸ್ಯಾಂಡಲ್ ಕ್ವೀನ್ ರಮ್ಯಾ ಅವರು ನಟಿಯಾಗಿ, ಸಂಸದೆಯಾಗಿ ಗುರುತಿಸಿಕೊಂಡವರು. ಅವರು ರಾಜಕೀಯಕ್ಕೆ ಕಾಲಿಟ್ಟ ನಂತರ ಸಿನಿಮಾ ರಂಗದಿಂದ ದೂರವಾಗಿದ್ದರು. ಆದರೆ ಇದೀಗ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಇನ್ನು ನಟಿ ರಮ್ಯಾ ಅವರು ಕನ್ನಡ ಮಾತ್ರವಲ್ಲದೇ ತಮಿಳು ಮತ್ತು ತೆಲುಗಿನಿಂದಲೂ ರಮ್ಯಾ ಅವರಿಗೆ ಹೇರಳ ಅವಕಾಶಗಳು ಹರಿದು ಬಂದವು.

ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ಅವರು ರಾಜಕೀಯದ ಕಡೆಗೆ ಮುಖ ಮಾಡಿದರು. ಅಷ್ಟೇ ಅಲ್ಲದೆ ಒಂದು ಬಾರಿ ಚುನಾವಣೆಯಲ್ಲಿ ವಿಜೇತರಾಗಿ ಸಂಸದೆಯಾಗಿದ್ದರು. ಇದೀಗ ಮತ್ತೆ ನಟಿ ರಮ್ಯಾ ಅವರು ಮತ್ತೆ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಒಂದರಲ್ಲಿ ಅಭಿನಯಿಸುವ ಮೂಲಕ ಮತ್ತೆ ಕನ್ನಡಿಗರ ಎದುರು ಕಾಣಿಸಿಕೊಳ್ಳಲಿದ್ದಾರೆ. ಹೌದು ಡಾಲಿಗೆ ನಾಯಕಿಯಾಗಿ ರಮ್ಯಾ ಬರುತ್ತಿದ್ದಾರೆ. ‘ಉತ್ತರಾಕಾಂಡ’ ಚಿತ್ರದ ಮೂಲಕ ಕಂಬ್ಯಾಕ್ ಆಗುತ್ತಿರುವ ರಮ್ಯಾ ಡಾಲಿ ಸಾಥ್ ನೀಡಿದ್ದಾರೆ.

ಇದರ ಬೆನ್ನಲ್ಲೇ ಇದೀಗ ನಟಿ ರಮ್ಯಾ ಅವರು ಕಿಚ್ಚ ಸುದೀಪ್ ಅವರೊಂದಿಗೆ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಹೌದು ಇತ್ತೀಚಿಗಷ್ಟೇ ನಟಿ ರಮ್ಯಾ ಅವರು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಕೇಳಿಬಂದಿತ್ತು. ಆದರೆ ಆ ವಿಷಯ ಸುಳ್ಳಾಯಿತು. ಹೀಗಾಗಿ ನಟಿ ರಮ್ಯಾ ಅವರ ಅಭಿಮಾನಿಗಳು ಬೇಸರಗೊಂಡಿದ್ದರು.

ಬಹು ವರ್ಷಗಳ ಬಳಿಕ ನಟಿ ರಮ್ಯಾ ಅವರು ಮತ್ತೆ ಪರದೆ ಮೇಲೆ ಕಾಣಿಸಿಕೊಳ್ಳುತ್ತಾರೆ ಎಂದು ಅವರ ಅಭಿಮಾನಿಗಳು ಸಖತ್ ಖುಷಿಯಲ್ಲಿದ್ದರು. ಆದರೆ ಅವರು ಆ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ ಎಂದು ಕೇಳಿ ಬೇಸರಗೊಂಡಿದ್ದರು. ನಂತರ ಇದೀಗ ರಮ್ಯಾ ಅವರು ಡಾಲಿಗೆ ನಾಯಕಿಯಾಗಿ ರಮ್ಯಾ ಬರುತ್ತಿದ್ದಾರೆ. ‘ಉತ್ತರಾಕಾಂಡ’ ಚಿತ್ರದ ಮೂಲಕ ಕಂಬ್ಯಾಕ್ ಆಗುತ್ತಿರುವ ರಮ್ಯಾ ಡಾಲಿ ಸಾಥ್ ನೀಡಿದ್ದಾರೆ.

ಇನ್ನು ಇದೆಲ್ಲದರ ಮಧ್ಯೆ ಇದೀಗ ಕಿಚ್ಚ ಸುದೀಪ್ ಅವರೊಂದಿಗೆ ಅವರು ಮತ್ತೆ ಚಿತ್ರ ಒಂದರಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕೂಡ ವೈರಲ್ ಆಗಿದೆ. ಹೌದು ರಂಗ ಎಸ್ಎಸ್ಎಲ್ಸಿ, ಕಿಚ್ಚ ಹುಚ್ಚ, ಜಸ್ಟ್ ಮಾತ್ ಮಾತಲ್ಲಿ, ಮುಸ್ಸಂಜೆಮಾತು ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಸುದೀಪ್ ಹಾಗೂ ರಮ್ಯಾ ಜೋಡಿಯಾಗಿ ನಟಿಸಿದ್ದರು. ಸುದೀಪ್ ಅವರ ಮುಂದಿನ ಪ್ರಾಜೆಕ್ಟ್ ಗೆ ರಮ್ಯಾನೇ ನಾಯಕಿ ಎನ್ನಲಾಗುತ್ತಿದೆ.
ನಟಿ ರಮ್ಯಾ ಉರ್ಫ್ ದಿವ್ಯ ಸ್ಪಂದನಾ ಅವರು ನವೆಂಬರ್ 29ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಅವರ 40ನೇ ವರ್ಷದ ಜನ್ಮದಿನದ ಪ್ರಯುಕ್ತ ಅಭಿಮಾನಿಗಳು ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ತಿಳಿಸಿದ್ದರು. ಇದೀಗ ಕಲಾವಿದ ಒಬ್ಬರ ಕೊಂಚದಲ್ಲಿ ರಮ್ಯಾ ಅವರ ಫೋಟೋ ಮೂಡಿ ಬಂದಿದೆ.

ಹೌದು ಕಲಾವಿದ ಬಾದಲ್ ನಂಜುಡಸ್ವಾಮಿ ಅವರು ವಿಶೇಷ ಪೇಂಟಿಂಗ್ ರಚಿಸಿದ್ದಾರೆ. ಸುಮಾರು 35 ಅಡಿ ಎತ್ತರ ಹಾಗೂ 15 ಅಡಿ ಅಗಲ ಇರುವ ಭಾವಚಿತ್ರವನ್ನು ಅವರು ಬಿಡಿಸಿದ್ದಾರೆ. ಇನ್ನು ಅವರ ಚಿತ್ರಕಲೆಗೆ ಮೆಚ್ಚುಗೆ ನೀಡಿರುವ ರಮ್ಯಾ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಆ ಫೋಟೋವನ್ನು ನೀವು ಇಲ್ಲಿ ನೋಡಬಹುದು.