ಕಂಬಳಿ ಹೊದ್ದು ಮಲಗಿದ ಶಿಸ್ತು ಸಮಿತಿ! ಬಾಯಿಗೆ ಬೀಗ ಹಾಕಿದ ತೀರ್ಪುಗಾರರ ಸಮಿತಿ
ಕಂಬಳಿ ಹೊದ್ದು ಮಲಗಿದ ಶಿಸ್ತು ಸಮಿತಿ!
ಇದೆಲ್ಲದರ ನಡುವೆ ಕಂಬಳ ಕ್ರೀಡಾಕೂಟದಲ್ಲಿ ಯಾವುದೇ ಅಹಿತಕರ ಘಟನೆ ನಡೆದಲ್ಲಿ ಮಾತನಾಡಬೇಕಾದ ಅಥವಾ ಶಿಸ್ತು ಕ್ರಮ ಕೈಗೊಳ್ಳಬೇಕಾದ ಕಂಬಳ ಶಿಸ್ತು ಸಮಿತಿ ಈ ಘಟನೆಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ನಿದ್ದೆಯಲ್ಲಿದೆ. ಕ್ರೀಡೆಯ ಸಂದರ್ಭದಲ್ಲಿ ತೀರ್ಪುಗಾರರು ಅಥವಾ ಇತರರ ಬಗ್ಗೆ ಆಶಿಸ್ತಿನ ನಡವಳಿಕೆಗಳನ್ನು ತಡೆಯುವುದು ಮತ್ತು ಶಿಸ್ತು ಉಲ್ಲಂಘನೆಯಾದರೆ ಶಿಕ್ಷೆ ವಿಧಿಸುವುದು ಈ ಸಮಿತಿಯ ಉದ್ದೇಶ. ಆದರೆ ಕಂಬಳ ಅಸೋಸಿಯೇಶನ್ ಆಗಲಿ, ಶಿಸ್ತು ಸಮಿತಿ ಆಗಲಿ ಈ ಬಗ್ಗೆ ಧ್ವನಿಯೆತ್ತದೇ ಇರುವುದು ಕಂಬಳ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬಾಯಿಗೆ ಬೀಗ ಹಾಕಿದ ತೀರ್ಪುಗಾರರ ಸಮಿತಿ!
ಮತ್ತೊಂದೆಡೆ ಕಂಬಳದಲ್ಲಿ ಪ್ರಧಾನ ಪಾತ್ರ ವಹಿಸುವ ತೀರ್ಪುಗಾರರ ಸಮಿತಿ ಕೂಡ ಈ ಬಗ್ಗೆ ಸೊಲ್ಲೆತ್ತದಿರುವುದು ಅಚ್ಚರಿ ಮೂಡಿಸಿದೆ. ಯಾವುದೇ ಕಂಬಳ ನಡೆಯುವಾಗ ನಾಲ್ಕೈದು ಜನ ಪ್ರಧಾನ ತೀರ್ಪುಗಾರರು, ಕಂಬಳ ಸಮಿತಿಯ ಅಧ್ಯಕ್ಷರು ಪ್ರತಿಕ್ರಿಯೆ ನೀಡುವುದು ಸಹಜ ನಡೆ. ಆದರೆ ಗುಣಪಾಲ ಕಡಂಬರಂತಹ ಹಿರಿಯರಿಗೆ ಅವಮಾನ ಆಗಿದ್ದರೂ ಸಹ ಯಾರೂ ಮಾತಾಡದೇ ಇರುವುದು ಕೆಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಂಬಳಕ್ಕಿಂತ ಸಭಾ ಕಾರ್ಯಕ್ರಮಕ್ಕೆ ಆದ್ಯತೆ!
ಸಾಮಾನ್ಯವಾಗಿ ಹೆಸರೇ ಸೂಚಿಸುವಂತೆ ಯಾವುದೇ ಕಂಬಳ ಕೂಟದಲ್ಲಿ ಕಂಬಳ ಕ್ರೀಡೆಯಲ್ಲಿ ಹೆಚ್ಚಿನ ಪ್ರಾಧಾನ್ಯತೆ ಕಂಬಳಕ್ಕೆ ಕೊಡಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಕಂಬಳ ಕೂಟಗಳು ಕಂಬಳಕ್ಕಿಂತ ಹೆಚ್ಚಾಗಿ ಸಭಾ ಕಾರ್ಯಕ್ರಮಕ್ಕೆ, ರಾಜಕೀಯ ನಾಯಕರ ಗುಣಗಾನಕ್ಕೆ ಮಹತ್ವ ನೀಡುತ್ತಿದೆ. ಪ್ರತೀ ಕಂಬಳದ ಸಮಯದಲ್ಲೂ ಕಂಬಳಾಭಿಮಾನಿಗಳು ಲೈವ್ ನೋಡುವ ಸಮಯದಲ್ಲಿ ಈ ಬಗ್ಗೆ ತಮ್ಮ ಅಪಸ್ವರ ಎತ್ತುತ್ತಲೇ ಇರುತ್ತಾರೆ.
ನಿಯಮದ ಪ್ರಕಾರ ಒಂದು ಕಂಬಳ ಕೂಟ 24 ಗಂಟೆಯಲ್ಲಿ ಮುಕ್ತಾಯವಾಗಬೇಕು. ಆದರೆ ಕಂಬಳ ಸಂಘಟಕರು ಕಾರ್ಯಕ್ರಮಕ್ಕೆ ಬರುವ ರಾಜಕೀಯ ನಾಯಕರ, ಅತಿಥಿಗಳ ಸತ್ಕಾರದಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ಪರಿಸ್ಥಿತಿ ತಮ್ಮ ಕೈಮೀರಿ ಹೋದಾಗ 24 ಗಂಟೆಯಲ್ಲಿ ಕಂಬಳ ಮುಗಿಸುವ ಹೊಣೆಗಾರಿಕೆಯನ್ನು ತೀರ್ಪುಗಾರರ ಹೆಗಲಿಗೆ ಹಾಕಿ ಬಿಡುತ್ತಾರೆ. ಇಂತಹ ವೇಳೆಯಲ್ಲಿ ಒತ್ತಡಕ್ಕೆ ಸಿಲುಕುವ ತೀರ್ಪುಗಾರರು ಕಂಬಳ ಬೇಗ ಮುಗಿಯಬೇಕು ಎನ್ನುವ ಕಾಳಜಿಯಿಂದ ಮಾತನಾಡಿದರೆ ಕೆಲವರು ಅದಕ್ಕೂ ಅಪಸ್ವರ ಎತ್ತುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಕಾಮೆಂಟ್ ಬಿಡಿ