ಶ್ರೀ ಕ್ಷೇತ್ರ ಬಪ್ಪನಾಡಿನ ಅನುವಂಶಿಕ ಮಾಕ್ತೇಸರ ಕಕ್ವಗುತ್ತು ಮನೋಹರ ಶೆಟ್ಟಿ ವಿಧಿವಶ
ಮೂಲ್ಕಿ:ಶ್ರೀ ಕ್ಷೇತ್ರ ಬಪ್ಪನಾಡಿನ ಅನನ್ಯ ಭಕ್ತರು ಹಾಗೂ ಕಲೋಪಾಸಕರು ಆಗಿ ನಾಡಿನಾದ್ಯಂತ ಭಕ್ತ ಬಂಧುಗಳ ಪ್ರೀತಿಗೆ ಪಾತ್ರರಾದವರು. ಬಂಟ ಸಮಾಜದ ಸರ್ವಶ್ರೇಷ್ಠ ವ್ಯಕ್ತಿ. ಮಕ್ಕಳಿಂದ ಮುದುಕನವರೆಗೆ ಇವರು ತೋರಿದ ಸಮಾನಾಧಾರ ಭಾವ. ಹೃದಯದ ಮಾತುಗಳು ಪ್ರತಿಯೊಬ್ಬರಿಗೂ ಆದರ್ಶದಾಯಕ. ಅನುಭವವೇ ದೇವರು ಎನ್ನುವ ಮಾತಿಗೆ ಅನುಸಾರವಾಗಿ ಜೀವನದಲ್ಲಿ ಸಾರ್ಥಕ್ಯವನ್ನು ಕಂಡು ಶ್ರೀ ಕ್ಷೇತ್ರ ಬಪ್ಪನಾಡಿನ ಮಹಾಮಾತೆಯ ಶ್ರೀರಕ್ಷೆಗೆ ಒಳಗಾಗಿ ಪ್ರತಿಯೊಬ್ಬರ ಹೃದಯದಲ್ಲಿ ಮನೆಮಾತದವರು. ಇವರನ್ನಗಲಿದ ಸಮಾಜ ಧರ್ಮ ಕ್ಷೇತ್ರ ಬಹುದೊಡ್ಡ ನಷ್ಟಕ್ಕೆ ಒಳಗಾಗಿದೆ.ಮಡದಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಕುಟುಂಬಸ್ಥರು ಮತ್ತು ಅಪಾರ ಬಂಧುಗಳು ಸಮಾಜವೇ ಶೋಕಸಾಗರದಲ್ಲಿ ಮುಳುಗಿದೆ. ಇವರ ಆತ್ಮವು ಪರಮಾತ್ಮನಲ್ಲಿ ಲೀನವಾಗಿ ಆತ್ಮಕ್ಕೆ ಸದಾ ಚಿರಶಾಂತಿ ಸಿಗಲಿ. ಅವರನ್ನಗಲಿದ ಅವರ ಮಡದಿ ಮಕ್ಕಳಿಗೆ ಸಮಾಜಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಕ್ಷೇತ್ರ ಮಾತೆ ಬಪ್ಪನಾಡಮ್ಮ ಒದಗಿಸಲಿ ಎಂದು ಪ್ರಾರ್ಥಿಸಿ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ.
ವಿಶೇಷ ಸೂಚನೆ :ಅವರ ಅಂತಿಮ ಸಂಸ್ಕಾರವು ಇಂದು ಮಧ್ಯಾಹ್ನ 3.30ಕ್ಕೆ ಕುಬೆವೂರು ಮನೆಯಲ್ಲಿ ನಡೆಸಲಾಗುವುದು.
ಕಾಮೆಂಟ್ ಬಿಡಿ