ಪ್ರೇತ-ಭಾದೆ ಕಾಡುತ್ತಿದೆ ಎಂದು ನೀವು ನಂಬುತ್ತೀರಾ ಇಲ್ಲ .. ಆದ್ರೂ ಇದು ಸತ್ಯವಾಗಿದೆ
ದಕ್ಷಿಣ ಕನ್ನಡ: ಭೂತ, ಪ್ರೇತ, ಆತ್ಮಗಳ ಕಥೆಗಳನ್ನು ನಾವು ಸಾಮಾನ್ಯವಾಗಿ ಸಿನಿಮಾಗಳಲ್ಲಿ ನೋಡುತ್ತೇವೆ. ಆದರೆ, ನಿಜ ಜೀವನದಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಎಂದು ನೀವು ನಂಬುತ್ತೀರಾ? ನಂಬಲು ಕಷ್ಟವಾದರೂ, ಇದು ಸತ್ಯವಾಗಿದೆ! ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದಲ್ಲಿ ಒಂದು ಕುಟುಂಬವನ್ನು ಕಳೆದ 3 ತಿಂಗಳಿಂದ ಪ್ರೇತ-ಭಾದೆ ಕಾಡುತ್ತಿದೆ.
ಉಮೇಶ್ ಶೆಟ್ಟಿ ಅವರ ಕುಟುಂಬವು ಇತ್ತೀಚೆಗೆ ವಿಚಿತ್ರ ಅನುಭವಗಳನ್ನು ಎದುರಿಸುತ್ತಿದೆ. ಮನೆಯಲ್ಲಿ ಪಾತ್ರೆಗಳು ಏಕಾಏಕಿ ಬೀಳುತ್ತವೆ, ಬಟ್ಟೆಗಳಿಗೆ ಇದ್ದಕ್ಕಿದ್ದಂತೆ ಬೆಂಕಿ ಬೀಳುತ್ತದೆ, ಮಲಗಿದಾಗ ಯಾರೋ ಕುತ್ತಿಗೆ ಹಿಡಿದಂತೆ ಅನುಭವವಾಗುತ್ತದೆ, ಮತ್ತು ಮನೆಯಲ್ಲಿ ಯಾರೋ ಅತ್ತಿಂದಿತ್ತ ಓಡಾಡುತ್ತಿರುವಂತೆ ಭಾಸವಾಗುತ್ತದೆ. ಇದರಿಂದಾಗಿ ಕುಟುಂಬದವರು ಭಯಭೀತರಾಗಿದ್ದಾರೆ.
ಉಮೇಶ್ ಶೆಟ್ಟಿ ಅವರ ಮಗಳು ತನ್ನ ಮೊಬೈಲ್ ಫೋನ್‌ನಲ್ಲಿ ವಿಚಿತ್ರ ಮುಖದ ಫೋಟೋವನ್ನು ಸೆರೆಹಿಡಿದಿದ್ದಾಳೆ. ಈ ಘಟನೆಯ ಬಗ್ಗೆ ಗ್ರಾಮದ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕುಟುಂಬದವರು ಈಗ ಭೂತ-ಪ್ರೇತಗಳ ಬಾಧೆಯಿಂದ ಮುಕ್ತಿ ಪಡೆಯಲು ಮಾರ್ಗವನ್ನು ಹುಡುಕುತ್ತಿದ್ದಾರೆ.
ಕಾಮೆಂಟ್ ಬಿಡಿ