ಕೇರಳದ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್
ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಸ್ಪಷ್ಟ ಬಹುಮತ ಸಾಧಿಸಿದ ನಂತರ 11ದಿನಗಳ ಕಾಲ ನಡೆದ ತೀವ್ರ ರಾಜಕೀಯ ನಾಟಕಕ್ಕೆ ಕೊನೆಗೂ ತೆರೆ ಬಿದ್ದಿದೆ. ಕಾಂಗ್ರೆಸ್ ಹೈಕಮಾಂಡ್ ವಿ.ಡಿ. ಸತೀಶನ್ ಅವರನ್ನು ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ಘೋಷಿಸಿದೆ. ದೆಹಲಿಯಲ್ಲಿ ಎಐಸಿಸಿ ನಾಯಕರು ಅಜಯ್ ಮಾಕೆನ್ ಮತ್ತು ಮುಕುಲ್ ವಾಸ್ನಿಕ್ ಅವರ ಸಮ್ಮುಖದಲ್ಲಿ ಈ ಮಹತ್ವದ ನಿರ್ಧಾರ ಪ್ರಕಟವಾಗಿದೆ.
ಕೆ.ಸಿ. ವೇಣುಗೋಪಾಲ್ ಮತ್ತು ವಿ.ಡಿ. ಸತೀಶನ್ ನಡುವಿನ ಪೈಪೋಟಿ ತೀವ್ರವಾಗಿತ್ತು. ವಿಪಕ್ಷ ನಾಯಕರಾಗಿ ಪಕ್ಷವನ್ನು ಸಂಘಟಿಸಿ, ಚುನಾವಣೆಯಲ್ಲಿ ಯುಡಿಎಫ್‌ಗೆ ಜಯ ತಂದುಕೊಟ್ಟ ಸತೀಶನ್ ಅವರು ಕೊನೆಗೂ ಸಿಎಂ ಪಟ್ಟ ಗೆದ್ದಿದ್ದಾರೆ. ರಾಹುಲ್ ಗಾಂಧಿ ಅವರು ವೇಣುಗೋಪಾಲ್ ಅವರ ಪರ ನಿಂತಿದ್ದರೂ, ಅಂತಿಮವಾಗಿ ಸತೀಶನ್ ಅವರಿಗೆ ಬೆಂಬಲ ಸಿಕ್ಕಿದೆ.
ಕಾಮೆಂಟ್ ಬಿಡಿ