ಜಿಲ್ಲಾ ಸುದ್ದಿಗಳು

ಮುಲ್ಕಿ,ಕಿನ್ನಿಗೋಳಿ ಮುಖ್ಯರಸ್ತೆಯ ಅವ್ಯವಸ್ಥೆಯನ್ನು ಕೇಳುವವರು ಯಾರು

ಮುಲ್ಕಿ: ರಾಜ್ಯ ಹೆದ್ದಾರಿಯಲ್ಲಿ ತಕ್ಕಮಟ್ಟಿಗೆ ವಾಹನ ಸಂಚಾರಕ್ಕೆ ಯೋಗ್ಯವಾಗಿತ್ತು . ಅದ್ರೆ ಅವೈಜ್ಞಾನಿಕವಾದ ನೀರಿನ ಪೈಪ್ ಲೈನ್ ಕಾಮಗಾರಿಯಿಂದ ಅಲ್ಲಲ್ಲಿ ರಸ್ತೆಯ ಮಧ್ಯೆ ಅಗೆದು ಸರಿಯಾಗಿ ಮುಚ್ಚದೆ ವಾಹನಗಾರರಿಗೆ ಯಮನಂತೆ ಕಾಡುತ್ತಿದೆ.

ಹೌದು.. ಇದು ಮುಲ್ಕಿ ಯಿಂದ ಕಿನ್ನಿಗೋಳಿಗೆ ಸಂಚರಿಸುವ ರಾಜ್ಯ ಹೆದ್ದಾರಿಯ ಕಥೆ ವ್ಯತೆಯಾಗಿದೆ. ಮಳೆ ಆರಂಭ ಆಗುವ ಕೆಲವು ದಿನಗಳ ಹಿಂದೆ ನೀರಿನ ಪೈಪ್ ಲೈನ್ ಮಾಡುವುದು ನೋಡುವಾಗ ಎಲ್ಲರ ಅನಿಸಿಕೆ ಒಂದೇ ಆಗಿತ್ತು. ಇದು ಹಣಮಾಡುವ ಕೆಲಸ ಅಲ್ಲದೇ ಜನರಿಗೆ ಬೇಕಾಗಿ ಕೆಲಸ ಅಲ್ಲ ಎಂದು. ಮಳೆಗಾಲ ಬರುವ ಮೊದಲೇ ಮಾಡಬೇಕಾದ ಕೆಲಸವನ್ನು ಮಳೆಬರುವ ಕೆಲವೇ ದಿನದಲ್ಲಿ ಮಾಡಲು ಆರಂಭಿಸುತ್ತಾರೆ ಎಂದ್ರೆ ಯಾರನ್ನು ಉದ್ದಾರ ಮಾಡೋದಕ್ಕೆ ಹೇಳಿ. ಜನರ ಮೇಲೆ ಕಾಳಜಿ ಇರುವಂತಹ ಜನಪ್ರತಿನಿಧಿಗಳು ಯಾಕೆ ಮೌನವಾಗಿದ್ದಾರೆ? ಎಂಬುದು ಜನಸಾಮಾನ್ಯರ ಪ್ರಶ್ನೆ.


ಉತ್ತರಿಸ ಬೇಕಾದ ಜನಪ್ರತಿನಿಧಿಗಳು ಕಾಂಗ್ರೆಸ್ಗೆ ಬೆರಳು ತೋರಿಸಿದ್ದಾರೆ. ಇತ್ತ ಕಾಂಗ್ರೆಸ್ ಮುಲ್ಕಿ ಭಾಗದಲ್ಲಿ ಇದೆಯೇ ಇಲ್ಲವೋ ಎಂಬಂತ ಸ್ಥಿತಿಗೆ ಬಂದಿದೆ. ಜನಸಾಮಾನ್ಯರ ಗೋಳು ಕೇಳುವವರು ಯಾರು.?

ಕೆಂಚನಕೆರೆಯ ದೊಡ್ಡ ತಿರುವಿನಲ್ಲಿ ರಸ್ತೆಯನ್ನು ಅಗೆದು ಸರಿಯಾಗಿ ಮುಚ್ಚದೆ ದಿನನಿತ್ಯವು ಅಪಘಾತ ಸಂಭವಿಸುತ್ತಿದ್ದರೂ ಡೊಂಟ್ ಕ್ಯಾರ್. ದೊಡ್ಡ ಅನಾಹುತ ಅದ್ರೆ ಎರಡೂ ಪಕ್ಷದವರು ಆರೋಪ ಪ್ರತ್ಯಾರೋಪ ಮಾಡುವುದಕ್ಕೆ ಸಿದ್ಧರಾಗಿರುತ್ತಾರೆ.


ಜವಾಬ್ದಾರಿಯ ಸ್ಥಾನದಲ್ಲಿ ಇರುವಂತಹ ಶಾಸಕರು ಹಾಗೂ ಅಧಿಕಾರಿಗಳು ರಾಜ್ಯದಲ್ಲಿ ಅಧಿಕಾರದಲ್ಲಿ ಇರುವಂತಹ ಕಾಂಗ್ರೆಸ್ ಮುಖಂಡರೇ ಇತ್ತ ಗಮನ ಹರಿಸಿ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ಪೈಪ್ ಲೈನ್ ಗುತ್ತಿಗೆ ಪಡೆದಂತಹ ಸಂಸ್ಥೆಯಿಂದಲೇ ರಸ್ತೆ ದುರಸ್ತಿಯನ್ನು ಮಾಡಿಸಿ. ಜನಸಾಮಾನ್ಯರ ಹಾಗೂ ವಾಹನಗಾರರ ಪ್ರಾಣದ ಜೊತೆ ಚೆಲ್ಲಾಟವನ್ನು ನಿಲ್ಲಿಸಿ. ಒಂದು ವೇಳೆ ಮಾಡದೆ ಡೋಂಟ್ ಕ್ಯಾರ್ ಎಂದ್ರೆ ಮುಂದೆ ಆಗುವಂತಹ ಅನಾಹುತಕ್ಕೆ ನೇರ ಹೊಣೆ ನೀವು.


ಕಾಮೆಂಟ್ ಬಿಡಿ

Join Us