ಮುಂಬೈ ಯಕ್ಷಗಾನ ಸಮಾರಾಧನೆಯ ತ್ರಿಂಶತ್ ಉತ್ಸವದಲ್ಲಿ ಧನಂಜಯ ಶೆಟ್ಟಿಗಾರ್ ರವರಿಗೆ ಗೌರವಾರ್ಪಣೆ
ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರಿ ಆರಾಧಕರಾಗಿ ಯಕ್ಷಗಾನಾರಾಧನೆಯ ಮೂಲಕ ಶ್ರೀ ದೇವಿಯ ಸಾಕ್ಷಾತ್ಕಾರ ಸಾದ್ಯ ಎಂದು ತೋರಿಸಿಕೊಟ್ಟ ಪರಮ ಪೂಜ್ಯರಾದ ಶ್ರೀ ಗೋಪಾಲಕೃಷ್ಣ ಅಸ್ರಣ್ಣರ ಆದರ್ಶ ತತ್ವಗಳಿಂದ. ಕಲಾಪ್ರೀತಿಯಿಂದ ಅಂತಸ್ಪೂರ್ತಿ ಪಡೆದು ಅದನ್ನೆ ಮೊಳಕೆಯಾಗಿಸಿ ಹುಟ್ಟಿಕೊಂಡ ಸಂಸ್ಥೆ ಕಟೀಲು ಶ್ರೀ ಗೋಪಾಲಕೃಷ್ಣ ಸಂಸ್ಮರಣಾ ಸಮಿತಿ ಮುಂಬಯಿ.
ಶ್ರೀ ದೇವಿಯ ಭಜಕರಾದ ಪದ್ಮನಾಭ ಕಟೀಲುರವರು ಕಳೆದ ಮೂವತ್ತು ವರ್ಷಗಳಿಂದ 450 ಕ್ಕೂ ಹೆಚ್ಚು ಯಕ್ಷಗಾನ ಕಲಾವಿದರಿಗೆ ಗೌರವ ನಿಧಿಯೊಂದಿಗೆ ಸಂಮಾನ,ಅಸ್ರಣ್ಣ ಸಂಸ್ಕರಣೆ, ಸುಹೃತ್ ಸಂಮಾನ,ಸಾಮೂಹಿಕ ವಿವಾಹ, ವಿದ್ಯಾರ್ಥಿ ವೇತನ ನೀಡುವಿಕೆ,ಅಶಕ್ತ ಕಲಾವಿದರಿಗೆ ಆರ್ಥಿಕ ನೆರವಿನಂತಹ ಹತ್ತು ಹಲವು ಕಾರ್ಯಕ್ರಮಗಳೊಂದಿಗೆ ಕಲೆ ಕಲಾವಿದರ ಪೋಷಣೆಯನ್ನೇ ಸಂಕಲ್ಪ ಮಂತ್ರವಾಗಿಸಿಕೊಂಡು ತೆಂಕು- ಬಡಗುಗಳ ಭೇದವಿಲ್ಲದೆ ಕಟೀಲು-ಪೆರ್ಡೂರು ಮೇಳಗಳ ಕಲಾವಿದರಿಂದ ಯಕ್ಷಗಾನಾರಾಧನೆ ನಡೆಸುತ್ತಾ ಬಂದಿದೆ. ಸಾಮಾಜಿಕ ಸಾಹಿತ್ಯಿಕ ಪೋಷಣೆಯನ್ನು ಅಸ್ರಣ್ಣರ ಹೆಸರಲ್ಲಿ ಮಾಡುತ್ತಾ ಶ್ರೇಷ್ಠ ದೈವಿಕ ಸಾಂಸ್ಕೃತಿಕ ವ್ಯಕ್ತಿಯೊಂದನ್ನು ಆರಾಧಿಸುತ್ತಾ ಬಂದಿದೆ.
ಯಕ್ಷಗಾನ ಪ್ರೀತಿಗೆ ಒಂದು ಹೊಸ ಹರಿವು ನೀಡಿ ಸಂಪೂಜ್ಯರ ಸಂಸ್ಕರಣೆ ಮಾಡುತ್ತಾ ಬಂದಿರುವ ಈ ಸಂಸ್ಥೆಗೆ ಮೂವತ್ತರ ಹರೆಯ.ಈ ನಡೆಯನ್ನು ಸ್ಮರಣೀಯಗೊಳಿಸಬೇಕಂಬ ಸದುದ್ದೇಶ ಹೊಂದಿರುವ ಈ ಸಂಸ್ಥೆಯು ಅಗಸ್ಟ್ ಎರಡರಂದು ಮುಂಬಯಿಯ ಕುರ್ಲಾದ ಬಂಟರ ಭವನದಲ್ಲಿ ಪೂಜ್ಯ ಅಸ್ರಣ್ಣರ ಸಂಸ್ಕರಣಾ ಕಾರ್ಯಕ್ರಮ ಆಯೋಜಿಸಿ, ಯಕ್ಷಗಾನ ಸತ್ರವೊಂದನ್ನು ಹಮ್ಮಿಕೊಂಡಿದ್ದು ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಪುಣ್ಯಪ್ರದವಾದ “ಶ್ರೀ ದೇವಿ ಮಾಹಾತ್ಮ್ಯೆ” ಯಕ್ಷಗಾನ ಪ್ರದರ್ಶನ, ವಿದ್ವತ್ ಸಂಮಾನ ಹಾಗೂ ಕಳೆದ ಮೂವತ್ತು ವರ್ಷಗಳಿಂದ ಸಂಸ್ಥೆಗೆ ಆಧಾರಿಸಿ ಸಹಕಾರ ನೀಡಿದ ಗಲ್ಫ್ ರಾಷ್ಟದ ಹನ್ನೆರಡು ಮಂದಿ ಕನ್ನಡ ಸಾಧಕರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ ಕಾರ್ಯಕ್ರಮವನ್ನು ಪದ್ಮನಾಭ ಕಟೀಲುರವರು ಹಮ್ಮಿಕೊಂಡಿದ್ದರೆ. ಕನ್ನಡ ಸಾಧಕರ ಹೆಸರಲ್ಲಿ ಧನಂಜಯ ಶೆಟ್ಟಿಗಾರ್ ದುಬೈ-ಕಿನ್ನಿಗೋಳಿ: ಯಕ್ಷ ಕಲಾ ಆರಾಧಕ, ಕಲಾ ಪೋಷಕರಾಗಿ ಹಾಗೂ ಪದ್ಮಶಾಲಿ ಸಮುದಾಯ ಉಡುಪಿ(ರಿ) ನ ಟ್ರಸ್ಟಿ ಗೌರವಿಸಲಾಗುವು
ಮುರತ್ತಮೇಲ್ ಶೆಟ್ಟಿಗಾರ್ ಕುಟುಂಬದ ಶ್ರೀಮತಿ ಶಾಂತ ಶ್ರೀ ಚಂದ್ರಹಾಸ ಶೆಟ್ಟಿಗಾರ್ ದಂಪತಿಯವರ ಪ್ರಥಮ ಪುತ್ರ ಶ್ರೀ ಧನಂಜಯ ಶೆಟ್ಟಿಗಾರ್ ರವರು, ಪ್ರಸ್ತುತ ಕೊಲ್ಲಿ ರಾಷ್ಟ್ರ ದಲ್ಲಿ ಕಳೆದ 18 ವರ್ಷಗಳಿಂದ ಉದ್ಯೋಗ ಮಾಡುತ್ತಾ ಸಾಧನೆ ಮಾಡಿ ತಾನು ಬೆಳೆದು, ತನ್ನಂತೆ ತನ್ನೂರಿನ ಯುವಕರು ಬೆಳೆಯಬೇಕೆಂಬ ಉತ್ತಮ ಮನೋಭಾವನೆಯಿಂದ ಹಲವಾರು ಯುವಕರಿಗೆ ಯುಎಇ ಯಲ್ಲಿ ಉದ್ಯೋಗವನ್ನು ಒದಗಿಸಿಕೊಟ್ಟು ಸ್ಥಿರತೆಯ ಜೀವನ ನಡೆಸಲು ನೇರವಾದ ವಿಶಾಲ ಹೃದಯ ವಂತರು. ಅದೆಷ್ಟೋ ಬಡ ಮಕ್ಕಳ ವಿದ್ಯೆಗೆ ತನ್ನ ಸಹಾಯಹಸ್ತ ನೀಡಿ ವಿದ್ಯಾರ್ಜನೆಗೆ ಸಹಕರಿಸಿದ್ದು ಮಾತ್ರವಲ್ಲದೆ ಹಲವಾರು ಹಿರಿಯರ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಿದ ಮಹಾನುಭಾವರು.
ಊರಿನ ಹಲವಾರು ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವುದು ಮಾತ್ರವಲ್ಲದೆ ಮುಂಚೂಣಿಯಲ್ಲಿ ಕೆಲಸ ಮಾಡಿ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲಾ ರೀತಿಯಲ್ಲಿ ಯಶಸ್ವಿಯಾಗುವುದಲ್ಲಿ ಇವರ ಪಾತ್ರ ಅಪಾರ. ಅದೇ ರೀತಿ ಕರ್ಮಭೂಮಿ ಯುಎಇ ಯಲ್ಲೂ ಕೂಡ ಸುಮಾರು ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲಿ ಭಾಗಿಯಾಗಿ ತನ್ನ ನಿಸ್ವಾರ್ಥ ಸೇವಾ ಮನೋಭಾವನೆಯ ಕಾರ್ಯಗಳಿಂದ ಜನಾನುರಾಗಿಹಲವಾರು ಸಂಘಟನೆಗಳಿಂದ ಗೌರವಿಸಲ್ಪಟ್ಟಿದ್ದಾರೆ.
ಜನವರಿ-2023ರ ಮುರತ್ತಮೇಲ್ ಮನೆಯ ವಠಾರದಲ್ಲಿ ನಡೆದ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಐದು ಮೇಳಗಳ ಯಕ್ಷಗಾನ ಸೇವೆ ಯಶಸ್ವಿಯಾಗುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಲ್ಲಿ ಕಳೆದ 29 ವರ್ಷಗಳಿಂದ ಸಕ್ರಿಯ ಸದಸ್ಯರಾಗಿ ಶೀಗಣಪತಿ ದೇವರ ಸೇವೆ ಮಾಡುತ್ತಾ ಇದ್ದಾರೆ. ಕಳೆದ ವರ್ಷ 50 ನೇ ಸ್ವರ್ಣ ಸಂಭ್ರಮದಲ್ಲಿ ದುಬೈ ಸಮಿತಿಯ ಸಂಚಾಲಕರಾಗಿ ಕಾರ್ಯನಿರ್ವಹಿಸಿ, ದುಬೈ ಭಕ್ತಾದಿಗಳಿಂದ ಸೇವ ರೂಪದಿಂದ ಶ್ರೀಮಹಾಗಣಪತಿ ದೇವರಿಗೆ ರಜತ ಪೀಠ ಸಮರ್ಪಿಸುವಲ್ಲಿ ಇವರ ಕೊಡುಗೆ ಅಮೋಘ, ಇದು ಹೆಮ್ಮೆತರುವ ವಿಷಯ. ಊರಿನ ಹಲವು ದೇವಸ್ಥಾನ, ಮಠ ಮಂದಿರದಲ್ಲಿ ಸೇವಾರೂಪದಲ್ಲಿ ದೇವರ ಸೇವೆ ಮಾಡಿರುವವರು, ಹಾಗೂ ಅನೇಕ ಸಂಘ ಸಂಸ್ಥೆಗಳಿಗೆ ಇವರ ಸಹಾಯ ಹಸ್ತ, ಕಲಾಆರಾಧನೆ, ಧಾರ್ಮಿಕ ಹಾಗೂ ಸಮಾಜ ಸೇವೆಯನ್ನೆಲ್ಲ ಗುರುತಿಸಿ ಅವರಿಗೆ ಕೀರ್ತಿಶೇಷ ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಂಸ್ಕರಣ ಸಮಿತಿ ಮುಂಬಯಿ ಸಮಿತಿ ಯವರು 02-08-2025 ಶನಿವಾರ ದಂದು ಮುಂಬಯಿನಲ್ಲಿ ಅದ್ದೂರಿಯಾಗಿ ನಡೆಯಲಿರುವ 25 ನೇ ವರ್ಷದ ಯಕ್ಷಗಾನ ಸಮಾರಾಧನೆಯ ತ್ರಿಂಶತ್ ಉತ್ಸವದಲ್ಲಿ ಹಲವಾರು ಉನ್ನತ ಸಾಧಕರೊಂದಿಗೆ, ಶ್ರೀ ಧನಂಜಯ ಶೆಟ್ಟಿಗಾರ್ ಇವರನ್ನು ಕಟೀಲು ಶ್ರೀಅಸ್ರಣ್ಣ ಸಹೋದರರ ಹಾಗೂ ಗಣ್ಯವ್ಯಕ್ತಿಗಳ ಸಮ್ಮುಖದಲ್ಲಿ ಸನ್ಮಾನಿಸಲಿರುವರು. ಇವರ ನಿಸ್ವಾರ್ಥ ಸೇವೆ ಇದೆ ರೀತಿ ಮುಂದುವರಿಯಲಿ.
ಕಾಮೆಂಟ್ ಬಿಡಿ