ಕ್ರೈಂ

ವಿರಾಟ್ ಕೊಹ್ಲಿ: ಈ ಪಂದ್ಯದಲ್ಲಿ ಹಲವು ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ

ಚೆನ್ನೈ: ಐಪಿಎಲ್‌ನಲ್ಲಿಂದು ಮೋಸ್ಟ್ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಈ ಪಂದ್ಯಕ್ಕೆ ಚೆನ್ನೈನ ಚೆಪಾಕ್ ಮೈದಾನ ಸಾಕ್ಷಿಯಾಗಲಿದೆ. ಎರಡು ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ತಂಡಗಳು ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಈ ನಡುವೆ ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಲವು ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ.

ಸಿಎಸ್‌ಕೆ ಹಾಗೂ ಆರ್‌ಸಿಬಿ ಎರಡೂ ತಂಡಗಳು ಕೂಡ ತಮ್ಮ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿವೆ. ಇಂದಿನ ಪಂದ್ಯದಲ್ಲಿ ಯಾವುದೇ ತಂಡ ಗೆದ್ದರು ಕೂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲಿದೆ. ಹಾಗಿದ್ರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಯಾವೆಲ್ಲ ಸಾಧನೆ ಮಾಡಲು ಮುಂದಾಗಿದ್ದಾರೆ ಎಂಬುದನ್ನು ನೋಡೋಣ ಬನ್ನಿ.

ಆರ್‌ಸಿಬಿಯ ವಿರಾಟ್ ಕೊಹ್ಲಿ ಮತ್ತು ಸಿಎಸ್‌ಕೆ ತಂಡದ ಎಂಎಸ್ ಧೋನಿ ಇಬ್ಬರೂ ಕೂಡ ಅನುಭವಿ ಆಟಗಾರು. ಮಾತ್ರವಲ್ಲ ಇಬ್ಬರೂ ಕೂಡ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮಾತ್ರವಲ್ಲ ವಿರಾಟ್ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಫಾರ್ಮ್ ನಲ್ಲಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ.

ವಿರಾಟ್ ಸಿಎಸ್‌ಕೆ ವಿರುದ್ಧ ಸದ್ಯ 1053 ರನ್ ಸಿಡಿಸಿದ್ದಾರೆ. ಆ ಮೂಲಕ ಸಿಎಸ್‌ಕೆ ವಿರುದ್ಧ ಅತೀ ಹೆಚ್ಚು ರನ್ ಸಿಡಿಸದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 1057 ರನ್ ಸಿಡಿಸಿರುವ ಶಿಖರ್ ಧವನ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಶಿಖರ್ ಧವನ್ ಅವರ ಈ ರೆಕಾರ್ಡ್ ಬ್ರೇಕ್ ಮಾಡಲು ಕೊಹ್ಲಿ ಇನ್ನೂ 5 ರನ್ ಅಗತ್ಯವಿದೆ.

ಇದರ ಜೊತೆಗೆ ವಿರಾಟ್ ಕೊಹ್ಲಿ ಅವರಿಗೆ ಇನ್ನೂ ಕೆಲವು ದಾಖಲೆಗಳನ್ನು ಬ್ರೇಕ್ ಮಾಡುವ ಅವಕಾಶ ಇದೆ. ವಿರಾಟ್ ಇಂದಿನ ಪಂದ್ಯದಲ್ಲಿ 55 ರನ್ ಸಿಡಿಸಿದರೆ ಸಾಕು ಅವರು ಟಿ-20 ಮಾದರಿಯೊಂದರಲ್ಲೇ 13,000 ರನ್ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗುತ್ತಾರೆ.

ಇನ್ನೂ ಇದೇ ಪಂದ್ಯದಲ್ಲಿ 38 ರನ್ ಗಳಿಸಿದರೆ ಸಾಕು ವಿರಾಟ್ ಕೊಹ್ಲಿ ಅವರು, ಟಿ-20 ಕ್ರಿಕೆಟ್‌ನಲ್ಲಿ ಆರಂಭಿಕ ಆಟಗಾರನಾಗಿ 5000 ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗುತ್ತಾರೆ. ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಸಿಡಿದ್ರೆ, ತಂಡದ ಗೆಲುವು ಮಾತ್ರವಲ್ಲದೆ. ಅವರು ಹಲವು ದಾಖಲೆಗಳನ್ನು ಕೂಡ ನಿರ್ಮಿಸುವ ಸಾಧ್ಯತೆ ಇದೆ.

ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ರೆಕಾರ್ಡ್ ನೋಡುವುದಾದ್ರೆ, ಅವರು ಇದುವರೆ 252 ಪಂದ್ಯಗಳನ್ನು ಆಡಿದ್ದು, ಒಟ್ಟಾರೆ 8004 ರನ್ ಸಿಡಿಸಿದ್ದಾರೆ. ಮಾತ್ರವಲ್ಲ ಅವರು ಐಪಿಎಲ್‌ನಲ್ಲಿ 8 ಶತಕ ಹಾಗೂ 55 ಅರ್ಧಶಕತಗಳನ್ನು ಸಿಡಿಸಿದ್ದಾರೆ.

ಕಾಮೆಂಟ್ ಬಿಡಿ

Join Us