ಮುನ್ನೂರು ಗ್ರಾಮದ ನಿರ್ಜನ ಪ್ರದೇಶದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಇದೀಗ ಟ್ವಿಸ್ಟ್
ಮಂಗಳೂರು : ಉಳ್ಳಾಲ ಠಾಣೆ ವ್ಯಾಪ್ತಿಯ ಮುನ್ನೂರು ಗ್ರಾಮದ ನಿರ್ಜನ ಪ್ರದೇಶದಲ್ಲಿ ಪಶ್ಚಿಮ ಬಂಗಾಳದ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರು ಅರೆಸ್ಟ್ ಮಾಡಿರುವ ಮೂರನೇ ಆರೋಪಿ ಮಂಗಳೂರಿನಲ್ಲೇ ಇರುವ ಬಗ್ಗೆ ದಾಖಲೆಗಳಿದ್ದು, ಈ ಕುರಿತಂತೆ ಆರೋಪಿ ಪರ ಮನೀಶ್ ಪರ ವಕೀಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ವಕೀಲರಾದ ವಿಕ್ರಂ ರಾಜ್, ಜೀವನ್ ಎ.ಎಂ. ಪೃಥ್ವಿಶ್ ಅವರು ಪೊಲೀಸರು ತಿಳಿಸಿದಂತೆ ಸಾಮೂಹಿಕ ಅತ್ಯಾಚಾರ ನಡೆದ ಅವಧಿಯಲ್ಲಿ ಮೂರನೇ ಆರೋಪಿಯು ಮಂಗಳೂರಿನಲ್ಲೇ ಇದ್ದ ಬಗ್ಗೆ ಸಿಸಿಟಿವಿ ಕ್ಯಾಮೆರಾ ದಾಖಲೆಗಳು ಇವೆ. ಕೆಲವು ಖಾಸಗಿ ಸ್ಥಳಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಇದು ದೃಢಪಟ್ಟಿದೆ. ಈ ಕಾರಣಕ್ಕೆ ಖಾಸಗಿ ಸ್ಥಳಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಮೂರನೇ ಆರೋಪಿಯ ಮೊಬೈಲ್ ಫೋನ್ ಲೊಕೇಷನ್ ಸಂಗ್ರಹಕ್ಕೆ ನ್ಯಾಯಾಲಯ ಆದೇಶ ನೀಡಿ, ದಾಖಲೆ ಸಂಗ್ರಹಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಖಾಸಗಿ ಸ್ಥಳಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಸಾಮಾನ್ಯವಾಗಿ ಏಳು ದಿನಗಳಲ್ಲಿ ಡಿಲೀಟ್ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಇವುಗಳ ಸಂಗ್ರಹ ಮಹತ್ವದ್ದಾಗಿದೆ ಎಂದು ನ್ಯಾಯಾಲಯವನ್ನು ಕೋರಲಾಗಿದ್ದು, ಇದರ ವಿಚಾರಣೆ ಏ.21ರಂದು ನಡೆಯಲಿದೆ’ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಬಂಧಿತ ಮೂರನೇ ಆರೋಪಿ ಘಟನೆ ನಡೆದ ಸಮಯದಲ್ಲಿ ಮಂಗಳೂರಿನಲ್ಲಿ ಇದ್ದ ಬಗ್ಗೆ ದಾಖಲೆಗಳು ಇದೆ ಎಂದು ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಕಾಮೆಂಟ್ ಬಿಡಿ