ಕ್ರೈಂ

ಧರ್ಮಸ್ಥಳದಲ್ಲಿ ಬುರುಡೆ ರಹಸ್ಯ: ರಾತ್ರಿ ಕಾರ್ಯಾಚರಣೆಗಿಳಿದಿದ್ದ ಮಾನವ ಹಕ್ಕುಗಳ ಆಯೋಗ

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಎನ್​ಹೆಚ್​ಆರ್​ಸಿ ಅಂದ್ರೆ ಮಾನವ ಹಕ್ಕುಗಳ ಆಯೋಗ ಎಂಟ್ರಿಯಾಗಿದೆ. ಕಳೆದ ರಾತ್ರಿಯೇ ಕಾರ್ಯಾಚರಣೆಗಿಳಿದ ಆಯೋಗ, ಧರ್ಮಸ್ಥಳ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮಣ್ಣು ಸುರಿದ ಆರೋಪ ಹೊತ್ತಿರುವ 16ನೇ ಪಾಯಿಂಟ್​ನಲ್ಲೂ ಪರಿಶೀಲಿಸಿದೆ. ಓರ್ವ ಐಪಿಎಸ್ ಅಧಿಕಾರಿ ಸೇರಿ ಬೆಳ್ತಂಗಡಿಯಲ್ಲಿ ಬೀಡುಬಿಟ್ಟಿರೋ ನಾಲ್ವರು ಅಧಿಕಾರಿಗಳ ತಂಡ ಇಂದು ಮತ್ತೆ ಅಖಾಡಕ್ಕೆ ಇಳಿಯಲಿದೆ. 

ಈ ಮಧ್ಯೆ ಮಾನವ ಹಕ್ಕುಗಳ ಆಯೋಗ ಧರ್ಮಸ್ಥಳದ ಹಾದಿಯಲ್ಲಿ ಹೆಜ್ಜೆ ಹಾಕಿರೋದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ವಿವಿಧ ಆಯಾಮಗಳಲ್ಲಿ ದಾಖಲೆ ಮತ್ತು ಮಾಹಿತಿಗಳ ಸಂಗ್ರಹ ಪೊಲೀಸ್​​ ಠಾಣೆ, ಎಸ್​​ಐಟಿ, ದೇವಸ್ಥಾನದಿಂದ ಮಾಹಿತಿ ಕಲೆ
ಧರ್ಮಸ್ಥಳ ಪಂಚಾಯತ್​ನಿಂದ ದಾಖಲೆಗಳ ಕೇಳಿದ ಮಾನವ ಹಕ್ಕುಗಳ ಆಯೋಗ. ಸ್ವಚ್ಛತಾ ಕಾರ್ಮಿಕರಿಂದ ಹೇಳಿಕೆಗಳನ್ನ ಸಂಗ್ರಹಿಸಿದ ಆಯೋಗ ಗೌಪ್ಯವಾಗಿ ಹಲವರ ಭೇಟಿ ಮಾಡಿ ವಿಚಾರಣೆ ನಡೆಸಿದೆ. ತಂಡ ಮುಂದಿನ 4-5 ದಿನ ಧರ್ಮಸ್ಥಳದಲ್ಲಿ ಬೀಡು ಬಿಡಲಿರುವ ಸಾಧ್ಯತೆ. ಅಲ್ಲದೆ ಶವ ಹೂತಿಟ್ಟ ಪಾಯಿಂಟ್​ಗಳಿಗೂ ಭೇಟಿ, ಪರಿಶೀಲನೆ. 

ಒಂದ್ಕಡೆ ಜಿಪಿಆರ್​ ಮೇಲಿನ ಕುತೂಹಲ ಮತ್ತೊಂದು ಕಡೆ ಮಾನವ ಹಕ್ಕು ಆಯೋಗದ ಬಲ ಶವ ಹೂತಿಟ್ಟ ಆರೋಪದ ಪ್ರಕರಣವನ್ನ ಮತ್ತಷ್ಟು ಜಟಿಲವಾಗಿಸಿದೆ. ಇಂದು ಡ್ರೋನ್ ಮೌಂಟಡ್ ರಾಡಾರ್ ಯಾವುದಾದ್ರೂ ಕುರುಹುಗಳನ್ನ ಪತ್ತೆ ಹಚ್ಚುತ್ತಾ ಕಾದು ನೋಡಬೇಕಿದೆ.

ಕಾಮೆಂಟ್ ಬಿಡಿ

Join Us