ಧರ್ಮಸ್ಥಳದಲ್ಲಿ ಬುರುಡೆ ರಹಸ್ಯ ದಿನೇ ದಿನೇ ಹೊಸ ಹೊಸ ತಿರುವು
ಧರ್ಮಸ್ಥಳ: ಧರ್ಮಸ್ಥಳದಲ್ಲಿ ಕೆಲವರು ನಾಪತ್ತೆ ಆರೋಪದ ಪ್ರಕರಣ ದಿನೇ ದಿನೇ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ಅಖಾಡಕ್ಕಿಳಿದ ಡ್ರೋನ್ ಮೌಂಟಡ್ ರಾಡಾರ್ ಮೇಲೆ ನಿರೀಕ್ಷೆ ಬೆಟ್ಟದಷ್ಟಾಗಿದೆ.
ಧರ್ಮಸ್ಥಳದಲ್ಲಿ ಬುರುಡೆ ರಹಸ್ಯ ಭೇದಿಸುತ್ತಿರೋ ಎಸ್ಐಟಿ ತಂಡ ನೆಲ ಅಗೆದು, ಬಗೆದು ಅಸ್ಥಿಪಂಜರಕ್ಕಾಗಿ ಹುಡುಕಾಟ ನಡೆಸುತ್ತಿದೆ. ಈ ಮಧ್ಯೆ ಜಿಪಿಆರ್ ಕಾರ್ಯಾಚರಣೆಗೆ ಎಂಟ್ರಿಕೊಟ್ಟಿರೋದು ಎಸ್ಐಟಿಗೆ ಆನೆ ಬಲ ಬಂದಂತಾಗಿದೆ. ನೇತ್ರಾವತಿ ನದಿ ತೀರ, ರತ್ನಗಿರಿ ಬೀಡು ಬಿಟ್ಟಿರೋ ಎಸ್ಐಟಿ ತಂಡದ ಜೊತೆ ಮತ್ತೊಂದು ತಂಡ ಧರ್ಮಸ್ಥಳದ ಹಾದಿ ಹಿಡಿದಿದೆ.
ನಿನ್ನೆ ನೇತ್ರಾವತಿ ನದಿ ತೀರದಲ್ಲಿ 13ನೇ ಪಾಯಿಂಟ್ನಲ್ಲಿ ಗಿಡಗಂಟಿಗಳ ಮಧ್ಯೆ ರೌಂಡ್ಸ್ ಹಾಕಿದ್ದ ಡ್ರೋನ್ ಮೌಂಟಡ್ ರಾಡಾರ್ಗೆ ಯಾವುದೇ ಕರುಹು ಪತ್ತೆಯಾಗಿರಲಿಲ್ಲ. ಇಂದು ಮತ್ತೆ ಜಿಪಿಆರ್ ಅಖಾಡಕ್ಕಿಳಿಯಲಿದೆ.
ಕಾಮೆಂಟ್ ಬಿಡಿ