ಕ್ರೈಂ

ಕೋಟಿ ಮೌಲ್ಯದ ಗಾಂಜಾ ಸಮೇತ ಸಿಕ್ಕಿಬಿದ್ದ ಕೇರಳದ ಬ್ಯೂಟಿ ಕಂಟೆಸ್ಟೆಂಟ್

ಮುಂಬೈ: ಜೂನ್ 10-11ರ ರಾತ್ರಿ ಹರ್ಷ ಸನ್ನಿ ಬ್ಯಾಂಕಾಕ್‌ನಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಅನುಮಾನದ ಮೇಲೆ, ಕಸ್ಟಮ್ಸ್ ಅಧಿಕಾರಿಗಳು ಅವರನ್ನು ವಿವರವಾದ ಪರಿಶೀಲನೆಗಾಗಿ ತಡೆದು ತಪಾಸಣೆಯ ಸಮಯದಲ್ಲಿ ಅವರ ಟ್ರಾಲಿ ಬ್ಯಾಗ್‌ನಿಂದ 12 ವ್ಯಾಕ್ಯೂಮ್-ಸೀಲ್ಡ್ ಪ್ಯಾಕೆಟ್‌ಗಳನ್ನು
 ವಶಪಡಿಸಿಕೊಂಡಿದ್ದಾರೆ.

ಸುಮಾರು ಅಂದಾಜು ಮೌಲ್ಯ 11.82 ಕೋಟಿ ರೂ.ಗಳಿಗಿಂತ ಹೆಚ್ಚು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೈಡ್ರೋಪೋನಿಕ್ಸ್ ಗಾಂಜಾವನ್ನು ಬ್ಯಾಂಕಾಕ್‌ನಿಂದ ಭಾರತಕ್ಕೆ ಸಾಗಿಸುತ್ತಿದ್ದ ಆರೋಪದ ಮೇಲೆ ಮಿಸೆಸ್ ಕೇರಳ ಸೌಂದರ್ಯ ಸ್ಪರ್ಧೆಯ ಮಾಜಿ ಸ್ಪರ್ಧಿಯನ್ನು ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ.ಮಾಡೆಲ್‌ ಹರ್ಷ ಸನ್ನಿ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಾಂಜಾ ಸಮೇತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.


ಆರೋಪಿ ಹರ್ಷ ಸನ್ನಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ನಂತರ ನ್ಯಾಯಾಲಯವು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಹರ್ಷ ಸನ್ನಿ ಈ ಹಿಂದೆ 2025 ರಲ್ಲಿ ಶ್ರೀಮತಿ ಕೇರಳ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆಪಾದಿತ ಕಳ್ಳಸಾಗಣೆ ಕಾರ್ಯಾಚರಣೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಕಾಮೆಂಟ್ ಬಿಡಿ

Join Us