ಆಕೆಯ ಸ್ನೇಹಿತನೇ ಕರೆಸಿ, ತನ್ನ ಗೆಳೆಯರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
ಚಿಕ್ಕನಾಯಕನಹಳ್ಳಿ: 19 ವರ್ಷದ ಯವತಿಯೊಬ್ಬಳನ್ನು ಆಕೆಯ ಸ್ನೇಹಿತನೇ ಕರೆಸಿ, ತನ್ನ ಗೆಳೆಯರ ಜತೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿರುವುದು ತಾಲೂಕಿನ ಕಂದಿಕೆರೆ ಹೋಬಳಿಯ ಆಶ್ರೀಹಾಲ್ ಗ್ರಾಮದಲ್ಲಿ ನಡೆದಿದೆ. ಜೂನ್ 9ರ ರಾತ್ರಿ 10.30 ರ ಸುಮಾರಿಗೆ, ಆರೋಪಿಯು ಪೋನ್ ಕರೆ ಮಾಡಿ ಯುವತಿಯನ್ನು ಮಾತನಾಡಬೇಕು ಎಂದು ಆಚೆ ಕರೆಸಿಕೊಂಡಿದ್ದಾನೆ. ಆಕೆ ಬಂದಾಗ ಆಕೆಯ ಬಾಯಿಗೆ ವೇಲ್ ಕಟ್ಟಿ ತನ್ನ ಸ್ನೇಹಿತರೊಂದಿಗೆ ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದಾನೆ. ಅಲ್ಲಿ ಆತ ಮೊದಲು ಆತ್ಯಾಚಾರ ಮಾಡಿ, ನಂತರ ತನ್ನ ಸ್ನೇಹಿತರಿಂದಲೂ ಆತ್ಯಾಚಾರ ಮಾಡಿಸಿದ್ದಾನೆ.
ಅತ್ಯಾಚಾರದ ನಂತರ ಯುವತಿಯು ತೀವ್ರ ಅಸ್ವಸ್ಥಳಾಗಿದ್ದಳು. ಆರೋಪಿಗಳು ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಮತ್ತು ನಿನ್ನ ಹೆತ್ತವರನ್ನು ಸಾಯಿಸುತ್ತೇವೆ ಎಂದು ಬೆದರಿಸಿ ಅಲ್ಲಿಂದ ಓಡಿಹೋಗಿದ್ದಾರೆ. ಯುವತಿ ಹೇಗೋ ಮನೆಗೆ ಬಂದು ತನಗಾದ ಅನ್ಯಾಯವನ್ನು ತಾಯಿಗೆ ತಿಳಿಸಿದ್ದಾಳೆ. ಆದರೆ ಆರೋಪಿಗಳ ಬೆದರಿಕೆಯಿಂದ ಹೆದರಿ ತಾಯಿ ಮತ್ತು ಮಗಳು ಕೃತ್ಯ ಎಸಗಿದ ಆರೋಪಿಗಳ ಬಗ್ಗೆ ಏನನ್ನೂ ಹೇಳದೆ ಸುಮ್ಮನಾಗಿದ್ದಾರೆ. ಕೆಲವು ದಿನಗಳ ನಂತರ ಹುಡುಗಿಯ ತಾಯಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಸಂತ್ರಸ್ತೆಯ ತಂದೆಗೆ ಈ ವಿಚಾರ ತಿಳಿದಾಗ ಮತ್ತೊಬ್ಬರ ಸಹಾಯದಿಂದ ಚಿಕ್ಕನಾಯಕನಹಳ್ಳಿ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕಾಮೆಂಟ್ ಬಿಡಿ