ಕೃಷಿ

ಕಾಪು: ಜುಲೈ 25, 26, 27 ರಂದು ಬೃಹತ್ ಹಲಸು ಮೇಳ

ಕಾಪುವಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕಾಪು ಬೃಹತ್  ಹಲಸು ಮೇಳ ಜುಲೈ 25, 26, 27 ರಂದು ಬೆಳಗ್ಗೆ 9:00 ರಿಂದ ರಾತ್ರಿ 8:00 ರವರೆಗೆ ಕಾಪು ಹಳೆ ಮಾರಿಗುಡಿ ಸಭಾಗೃಹದಲ್ಲಿ ಆಯೋಜಿಸಲಾಗಿದೆ.

ಈ ಮೇಳದಲ್ಲಿ ನಾಗು ಹಲಸು, ನಂದು ಹಲಸು, ಶಂಕರ ಹಲಸು, ರುದ್ರಾಕ್ಷಿ ಹಲಸು, ಚಂದ್ರ ಹಲಸು ಮುಂತಾದ ರುಚಿ ರುಚಿಯಾದ ಹಲಸಿನ ಹಣ್ಣು ಗಳು ಗುಬ್ಬಿ, ತುಮಕೂರು, ದೊಡ್ಡಬಳ್ಳಾಪುರ, ಉಪ್ಪಿನಂಗಡಿ, ಕುಂದಾಪುರ ಮುಂತಾದ ಪ್ರದೇಶಗಳಿಂದ ಬರಲಿವೆ. ವಿವಿಧ ತಳಿಯ ಮಾವಿನ ಹಣ್ಣುಗಳು, ಹಲಸಿನ ಹಣ್ಣಿನ ಖಾದ್ಯ ಗಳಾದ ಹೋಳಿಗೆ - ಜಿಲೇಬಿ - ಸಾಟ್ - ಕಡುಬು - ಮುಳ್ಕ - ಕೇಸರಿ ಬಾತ್ - ಹಲ್ವಾ -  ಪಾಯಸ - ಹಪ್ಪಳ - ಮಾಂಬುಳ - ಸೆಂಡಿಗೆ - ಚಿಪ್ಸ್ - ಜಾಮ್ - ಗುಜ್ಜೆ ಉಪ್ಪಿನಕಾಯಿ, ಗುಜ್ಜೆ ಪೋಡಿ, ಗುಜ್ಜೆ ಕಬಾಬ್, ಪತ್ರೊಡೆ, ಹಲಸಿನ ಐಸ್ ಕ್ರೀಮ್ - ಮಿಲ್ಕ್ ಶೇಕ್, ಉಪ್ಪಡ್ ಪಚ್ಚಿರ್, ಒಣಗಿಸಿದ ಹಲಸು, ಒಣಗಿಸಿದ ಬಾಳೆ ಹಣ್ಣು, ಮಿಡಿ ಉಪ್ಪಿನಕಾಯಿ, ಮ್ಯಾಂಗೋ ಸಾಟ್, ಮ್ಯಾಂಗೋ ಜ್ಯೂಸ್, ಕಲ್ಪರಸ, ಗೋಳಿ ಸೋಡಾ, ಆಭರಣ ಗಳು, ಉಡುಪಿ ಕೈಮಗ್ಗ - ಖಾದಿ ಬಟ್ಟೆಗಳು, ಕೋಲ್ಕತ್ತಾ ಸೀರೆಗಳು, ಗಿಡಗಳ ಭಾರಿ ಸಂಗ್ರಹ ಇರುವ ನರ್ಸರಿ, ತರಕಾರಿ ಗೆಡ್ಡೆ ಮತ್ತು ಬೀಜಗಳು, ಆಯುರ್ವೇದಿಕ್ ಮತ್ತು ಗೋ ಉತ್ಪನ್ನಗಳು, ಮತ್ತಿತರ ಗ್ರಹ  ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಜರುಗಲಿದೆ.

ಉದ್ಘಾಟನಾ ಅವಧಿಯು ದಿನಾಂಕ 25.7.2025 ಅಪರಾಹ್ನ 3 ರಿಂದ 4 ಗಂಟೆವರೆಗೆ ಜರುಗಲಿದೆ.ಕಾಪು ವಿನ ಮಾನ್ಯ ಶಾಸಕರು  ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಇವರು ಮೇಳವನ್ನು ಉದ್ಘಾಟಿಸಲಿರುವರು. ಅಭ್ಯಾಗತರಾಗಿ ಶ್ರೀ ಪ್ರಸಾದ್ ಶೆಣೈ, ಆಡಳಿತ ಮೊಕ್ತೇಸರರು, ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ, ಕಾಪು, ಶ್ರೀ ವಾಸುದೇವ ಶೆಟ್ಟಿ, ಅಧ್ಯಕ್ಷರು, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ, ಶ್ರೀಮತಿ ಪ್ರತಿಭಾ ಆರ್,ತಹಶೀಲ್ದಾರ್, ಕಾಪು, ಶ್ರೀ ವಿಕ್ರಂ ಕಾಪು, ಅಧ್ಯಕ್ಷರು, ಯೋಜನಾ ಪ್ರಾಧಿಕಾರ, ಕಾಪು, ಶ್ರೀ ನಾಗರಾಜ್ ಚಿಕ್ಕಲಪರವಿ ಮುಖ್ಯ ಅಧಿಕಾರಿ, ಪುರಸಭೆ, ಕಾಪು, ಶ್ರೀ ನವೀನ್ ಶೆಟ್ಟಿ ಕುತ್ಯಾರು ಪ್ರಗತಿಪರ ಕೃಷಿಕರು, ಸಾಮಾಜಿಕ ಕಾರ್ಯಕರ್ತರು, ಶ್ರೀ ದೇವಿ ಪ್ರಸಾದ್ ಶೆಟ್ಟಿ ಬೆಳಪು, ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಶ್ರೀ ಯೋಗೀಶ್ ಶೆಟ್ಟಿ ಉದ್ಯಮಿ, ಕಾಪು, ಶ್ರೀ ವೈ ಸುಕುಮಾರ್, ನವರಂಗ್ ಗ್ರೂಪ್, ಪಡುಬಿದ್ರಿ, ಶ್ರೀ ಉದಯ್ ಶೆಟ್ಟಿ ಇನ್ನ, ಉದ್ಯಮಿ, ಪಡುಬಿದ್ರೆ,ಶ್ರೀ ಜಿತೇಂದ್ರ ಶೆಟ್ಟಿ,ಉದ್ಯಮಿ, ಉದ್ಯಾವರ ಭಾಗವಹಿಸಲಿದ್ದಾರೆ.

ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಸ್ವಾದಿಷ್ಟ ತಿಂಡಿ ತಿನಿಸುಗಳನ್ನು ಆಸ್ವಾದಿಸಿ, ಖರೀದಿಸಿ,  ಮೇಳವನ್ನು ಯಶಸ್ವಿಗೊಳಿಸಬೇಕಾಗಿ ಆಯೋಜಕರಾದ ಅನಿಲ್ ಕುಮಾರ್ ಕಾಪು ಅಧ್ಯಕ್ಷರು, ಸ್ಥಾಯಿ ಸಮಿತಿ, ಕಾಪು ಪುರಸಭೆ ಮತ್ತು ರತ್ನಾಕರ್ ಇಂದ್ರಾಳಿ ಸಂಸ್ಕೃತಿ ಈವೆಂಟ್ಸ್, ಉಡುಪಿ ಇವರು ವಿನಂತಿಸಿಕೊಂಡಿದ್ದಾರೆ.

ಕಾಮೆಂಟ್ ಬಿಡಿ

Join Us