ಆರೋಗ್ಯ

International Day of Yoga: ಪ್ರಯಾಣಿಕರಿಗಾಗಿ ಆರೋಗ್ಯಕರ 'ಯೋಗ ಡೇ ಸ್ಪೆಷಲ್ ಮೀಲ್' ಬಿಡುಗಡೆ ಮಾಡಿದ 'ಆಕಾಶ ಏರ್'

ಬೆಂಗಳೂರು: ದೇಶದ ಜನಪ್ರಿಯ ವಿಮಾನಯಾನ ಸಂಸ್ಥೆ 'ಆಕಾಶ ಏರ್' ಮುಂಬರುವ 'ಅಂತಾರಾಷ್ಟ್ರೀಯ ಯೋಗ ದಿನ'ವನ್ನು ವಿಶಿಷ್ಟವಾಗಿ ಆಚರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ಆನ್‌ಬೋರ್ಡ್ ಆಹಾರ ಸೇವೆಯಾದ 'ಕೆಫೆ ಆಕಾಶ' ಸತತ ನಾಲ್ಕನೇ ಆವೃತ್ತಿಯ 'ಯೋಗ ಡೇ ಸ್ಪೆಷಲ್ ಮೀಲ್' ಅನ್ನು ಪರಿಚಯಿಸಿದೆ.

ಯೋಗವು ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಸಮತೋಲನವನ್ನು ಕಲಿಸುತ್ತದೆ. ಇದೇ ತತ್ವವನ್ನು ಆಧಾರವಾಗಿಟ್ಟುಕೊಂಡು, ಪ್ರಯಾಣಿಕರಿಗೆ ಅತ್ಯಂತ ಆರೋಗ್ಯಕರ, ಪೌಷ್ಟಿಕಾಂಶಯುಕ್ತ ಹಾಗೂ ರುಚಿಕರವಾದ ಆಹಾರವನ್ನು ಒದಗಿಸಲು ಈ ವಿಶೇಷ ಮೆನುವನ್ನು ಸಿದ್ಧಪಡಿಸಲಾಗಿದೆ.

ವಿಶೇಷ ಊಟದಲ್ಲಿ ಏನೇನಿರಲಿದೆ?

ಆಕಾಶ ಏರ್‌ನ ಈ ಯೋಗ ಡೇ ಸ್ಪೆಷಲ್ ಮೀಲ್‌ನಲ್ಲಿ, ಪೌಷ್ಟಿಕಾಂಶದಿಂದ ಕೂಡಿದ ಸಿರಿಧಾನ್ಯಗಳು, ತಾಜಾ ಹಣ್ಣುಗಳು, ಮೊಸರು ಹಾಗೂ ಸೀಸನಲ್ ಪದಾರ್ಥಗಳನ್ನು ಬಳಸಲಾಗಿದೆ.

ಅವಕಾಡೊ, ದಾಳಿಂಬೆ ಮತ್ತು ತುಳಸಿ ಬೆರೆಸಿದ ತಾಜಾ 'ಮಿಲ್ಲೆಟ್ ಸಲಾಡ್', ರುಚಿಯಾದ 'ಬೆರ್ರಿ ಮ್ಯೂಸ್ಲಿ ಯೋಗರ್ಟ್ ಪರ್ಫೈಟ್' ಹಾಗೂ  ಇದರ ಜೊತೆಗೆ ಪ್ರಯಾಣಿಕರು ತಮ್ಮ ಆಯ್ಕೆಯ ಪಾನೀಯವನ್ನು ಸವಿಯಬಹುದಾಗಿದೆ.

ವಿಮಾನದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಭರ್ಜರಿ ಭೋಜನವನ್ನು ಮಾಡುವ ಬದಲು, ಹೊಟ್ಟೆಗೆ ಹಗುರವಾದ ಹಾಗೂ ಆರೋಗ್ಯಕರವಾದ ಊಟವನ್ನು ಸವಿಯಲು ಇದು ಸಹಾಯ ಮಾಡಲಿದೆ.

ಬುಕ್ಕಿಂಗ್ ಹೇಗೆ?

ಈ 'ಯೋಗ ಡೇ ಸ್ಪೆಷಲ್ ಮೀಲ್' ಕೇವಲ ಯೋಗ ದಿನದಂದು ಮಾತ್ರವಲ್ಲದೆ, ಇಡೀ ಜೂನ್ ತಿಂಗಳ ಪೂರ್ತಿ ಆಕಾಶ ಏರ್‌ನ ಎಲ್ಲಾ ವಿಮಾನಗಳಲ್ಲಿ ಲಭ್ಯವಿರಲಿದೆ. ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗಲೇ ಆಕಾಶ ಏರ್‌ನ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಈ ಊಟವನ್ನು ಪ್ರೀ-ಬುಕ್ ಮಾಡಿಕೊಳ್ಳಬಹುದು.

ಹಬ್ಬಗಳ ಆಚರಣೆಗೆ ಸೈ ಎನಿಸಿಕೊಂಡ 'ಕೆಫೆ ಆಕಾಶ'

ಆಗಸ್ಟ್ 2022ರಲ್ಲಿ ಕಾರ್ಯಾಚರಣೆ ಆರಂಭಿಸಿದಾಗಿನಿಂದಲೂ, ಆಕಾಶ ಏರ್ ಸಂಸ್ಥೆಯು ಪ್ರತಿ ಹಬ್ಬ ಹಾಗೂ ವಿಶೇಷ ದಿನಗಳನ್ನು ವಿಮಾನದಲ್ಲಿ ಸಂಭ್ರಮಿಸುತ್ತಾ ಬಂದಿದೆ. ಮಕರ ಸಂಕ್ರಾಂತಿ, ಹೋಳಿ, ಈದ್, ಕ್ರಿಸ್‌ಮಸ್, ಗಣೇಶ ಚತುರ್ಥಿ, ದೀಪಾವಳಿ, ಓಣಂ, ವ್ಯಾಲೆಂಟೈನ್ಸ್ ಡೇ, ತಾಯಂದಿರ ದಿನ ಮುಂತಾದ ಹಬ್ಬಗಳ ಸಂದರ್ಭದಲ್ಲಿ ಆಯಾ ಪ್ರದೇಶದ ವಿಶೇಷ ಖಾದ್ಯಗಳನ್ನು ಪ್ರಯಾಣಿಕರಿಗೆ ನೀಡುತ್ತಾ ಬಂದಿದೆ. 

ಅಲ್ಲದೆ, ವಿಮಾನದಲ್ಲೇ ಹುಟ್ಟುಹಬ್ಬ ಅಥವಾ ವಾರ್ಷಿಕೋತ್ಸವ ಆಚರಿಸುವವರಿಗಾಗಿ ಮುಂಚಿತವಾಗಿ ಕೇಕ್ ಕಾಯ್ದಿರಿಸುವ ಅವಕಾಶವನ್ನೂ ಒದಗಿಸಿದೆ.

ಪ್ರಸ್ತುತ ಕೆಫೆ ಆಕಾಶ ಮೆನುವಿನಲ್ಲಿ 45ಕ್ಕೂ ಹೆಚ್ಚು ಬಗೆಯ ರುಚಿಕರವಾದ ಭಕ್ಷ್ಯಗಳು, ಸ್ನ್ಯಾಕ್ಸ್ ಮತ್ತು ಪಾನೀಯಗಳು ಲಭ್ಯವಿದ್ದು, ಇವುಗಳನ್ನು ಭಾರತದ ಖ್ಯಾತ ಬಾಣಸಿಗರು ವಿನ್ಯಾಸಗೊಳಿಸಿದ್ದಾರೆ.

ಕಾಮೆಂಟ್ ಬಿಡಿ

Join Us