ಜನರಿಗೆ ಪವರ್​ ಶಾಕ್​​​..! ಅಕ್ಟೋಬರ್​​​​ 1ರಿಂದ ವಿದ್ಯುತ್‌ ದರ ಹೆಚ್ಚಳ..!

ಬೆಂಗಳೂರು: ಅಕ್ಟೋಬರ್​​​​ 1ರಿಂದ ರಾಜ್ಯದ ಜನರಿಗೆ ಪವರ್​ ಶಾಕ್​​​. ಇಂಧನ ಹೊಂದಾಣಿಕೆ ಶುಲ್ಕವನ್ನು (ಎಫ್‌ಎಸಿ) ಅಕ್ಟೋಬರ್‌ 1ರಿಂದ ಜಾರಿಗೆ ಬರಲಿದೆ. 2023ರ ಮಾರ್ಚ್‌ 31ರವರೆಗೆ ಅನ್ವಯವಾಗುವಂತೆ ಪರಿಷ್ಕರಿಸಿ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ ಆದೇಶ ಹೊರಡಿಸಿದೆ. ಹೀಗಾಗಿ, ಪ್ರತಿ ಯೂನಿಟ್‌ಗೆ 24 ಪೈಸೆಯಿಂದ 43 ಪೈಸೆವರೆಗೆ ಹೆಚ್ಚಳವಾಗಲಿದೆ. ಇದೇ ಜುಲೈನಲ್ಲಿ 31 ಪೈಸೆ ಹೆಚ್ಚಿಸಲಾಗಿತ್ತು. ಕಲ್ಲಿದ್ದಲು ದರ ಏರಿಕೆ ಹಿನ್ನೆಲೆಯಲ್ಲಿ ಎಫ್ಎಸಿ ಹೆಚ್ಚಿಸಲಾಗಿದೆ. ಯೂನಿಟ್‌ಗೆ 48ರಿಂದ 86 ಪೈಸೆ ವೆಚ್ಚ ಏರಿಕೆಯಾಗಿದೆ. 2022ರ ಏಪ್ರಿಲ್‌ನಿಂದ ಜೂನ್‌ವರೆಗೆ 643 ಕೋಟಿಯಷ್ಟು ವಿದ್ಯುತ್‌ ಖರೀದಿ ವೆಚ್ಚ ಹೆಚ್ಚಳವಾಗಿದ್ದು, 80 ಪೈಸೆ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ವಸೂಲಿಗೆ ಕೆಇಆರ್‌ಸಿಗೆ ಬೆಸ್ಕಾಂ ಅರ್ಜಿ ಸಲ್ಲಿಸಿತ್ತು. 55 ಪೈಸೆಯಷ್ಟು ಹೆಚ್ಚು ಶುಲ್ಕ ಪಡೆಯಲು ಮೆಸ್ಕಾಂ, 70 ಪೈಸೆಯಷ್ಟು ಹೆಚ್ಚಿಸುವಂತೆ ಸೆಸ್ಕ್‌, 81 ಪೈಸೆ ಹೆಚ್ಚಿಸುವಂತೆ ಹೆಸ್ಕಾಂ ಮತ್ತು 58 ಪೈಸೆ ಹೆಚ್ಚಿಸುವಂತೆ ಜೆಸ್ಕಾಂ ಅರ್ಜಿ ಸಲ್ಲಿಸಿದ್ದವು. ಒಟ್ಟಾರೆಯಾಗಿ 1244 ಕೋಟಿಗೂ ಹೆಚ್ಚು ಖರೀದಿ ವೆಚ್ಚ ಏರಿಕೆಯಾಗಿದೆ ಎಂದು ಎಸ್ಕಾಂಗಳು ಪ್ರಸ್ತಾವದಲ್ಲಿ ತಿಳಿಸಿದ್ದವು. ಮೂರು ತಿಂಗಳಿಗೊಮ್ಮೆ ಇಂಧನ ಹೊಂದಾಣಿಕೆ ಶುಲ್ಕ ಪರಿಷ್ಕರಿಸಲಾಗುತ್ತದೆ. ಆದರೆ, ಗ್ರಾಹಕರಿಗೆ ಹೆಚ್ಚುವರಿ ಹೊರೆ ತಪ್ಪಿಸುವ ಉದ್ದೇಶದಿಂದ ಈಗ ಆರು ತಿಂಗಳಿಗೆ ಅನ್ವಯಿಸಲಾಗಿದೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.