ಆಫ್ರಿಕಾ: ಕಾಡಿನ ರಾಜ ಸಿಂಹದ ಜೊತೆಗಿನ ಚೆಲ್ಲಾಟ ವ್ಯಕ್ತಿಯೊಬ್ಬನಿಗೆ ದುಬಾರಿ ಪರಿಣಮಿಸಿದ್ದು, ವ್ಯಕ್ತಿ ತನ್ನ ಜೀವನದಲ್ಲಿಯೇ ಮರೆಯಲಾರದ ಪೆಟ್ಟು ತಿಂದಿದ್ದಾನೆ. ಕಾಡಿಗೆ ಹಾಗೂ ಮೃಗಾಲಯಕ್ಕೆ ಭೇಟಿ ನೀಡುವವರನ್ನು ಸಿಂಹದಿಂದ ಅಂತರ ಕಾಯ್ದುಕೊಳ್ಳಲು ಸಲಹೆ ನೀಡಲಾಗುತ್ತದೆ. ಪಂಜರದಲ್ಲಿದ್ದರೂ ಕೂಡ ಇದು ತುಂಬಾ ಅಪಾಯಕಾರಿಯಾಗಿರುತ್ತದೆ. ಅಷ್ಟಾದರೂ ಕೂಡ ಕೆಲವರು ಸಿಂಹದ ಜೊತೆಗೆ ಚೆಲ್ಲಾಟವಾಡಲು ಮುಂದಾಗುತ್ತಾರೆ.
ಈ ವಿಡಿಯೋವನ್ನು ಆಫ್ರಿಕಾದ ಮೃಗಾಲಯದಲ್ಲಿ ಚಿತ್ರೀಕರಿಸಲಾಗಿದೆ. ಮೃಗಾಲಯಕ್ಕೆ ಓರ್ವ ವ್ಯಕ್ತಿ ಭೇಟಿ ನೀಡಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಈ ಸಂದರ್ಭದಲ್ಲಿ ಪಂಜರದಲ್ಲಿರುವ ಸಿಂಹವನ್ನು ಕಂಡು ಆತ ಸಿಂಹದ ಜೊತೆಗೆ ಚೆಲ್ಲಾಟಕ್ಕೆ ಮುಂದಾಗಿದ್ದಾನೆ. ಈ ಚೆಲ್ಲಾಟ ಆತನಿಗೆ ಜೀವನದಲ್ಲಿಯೇ ಮರೆಯಲಾಗದ ಅನುಭವವನ್ನು ನೀಡಿದೆ.ಈ ವಿಡಿಯೋ ನೋಡಿದರೆ ಒಂದು ಕ್ಷಣ ಮೈಯಲ್ಲಿ ನಡುಕ ಹುಟ್ಟುತ್ತದೆ.
Show off bring disgrace
— Ms blunt from shi born 🇯🇲 “PRJEFE” (@OneciaG) May 21, 2022
The lion at Jamaica Zoo ripped his finger off. pic.twitter.com/Ae2FRQHunk
ಇದಾದ ಬಳಿಕ ವ್ಯಕ್ತಿ ಸಿಂಹದ ಬಾಯಿಯಿಂದ ತನ್ನ ಕೈಯನ್ನು ಬಿಡಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾನೆ. ಕೊನೆಗೂ ಕಷ್ಟಸಾಧ್ಯ ಎಂಬಂತೆ ಆತ ತನ್ನ ಕೈಯನ್ನು ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ, ಅಷ್ಟೊತ್ತಿಗೆ ಸಿಂಹ ಆತನ ಒಂದು ಬೆರಳನ್ನು ಕತ್ತರಿಸುವಲ್ಲಿ ಯಶಸ್ವಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ.
- ನ್ಯೂಸ್ ಬ್ಯೂರೋ true news ಕನ್ನಡ