ಚೀನಾ;ಚೀನಾದಲ್ಲಿ ಸೊಳ್ಳೆಗಳನ್ನು ಸಾಯಿಸುವ ಬದಲು, ಹೊಸ ಸೊಳ್ಳೆ ಉತ್ಪಾದನೆ ಮಾಡಲಾಗುತ್ತದೆ.ಈ ಮೂಲಕ ರೋಗ ಹರಡುವ ಸೊಳ್ಳೆಗಳನ್ನು ಸಾಯಿಸಲು ಹೊಸ ಸೊಳ್ಳೆಗಳನ್ನು ಕಾರ್ಖಾನೆಯಲ್ಲೇ ಉತ್ಪಾದಿಸಲಾಗುತ್ತದೆ ಎನ್ನುವುದು ಬಹಿರಂಗವಾಗಿದೆ.

ಸನ್ ಯಾಟ್ ಸೆಟ್ ವಿಶ್ವವಿದ್ಯಾನಿಲಯದ ನಿರ್ದೇಶನದಂತೆ ಸೊಳ್ಳೆಗಳ ಉತ್ಪಾದನೆ ಮಾಡಲಾಗುತ್ತದೆ. ಚೀನಾದ ದಕ್ಷಿಣ ಭಾಗದ ಗುವಾಂಗ್ ಝೌದಲ್ಲಿ ಸೊಳ್ಳೆಗಳನ್ನು ಉತ್ಪಾದಿಸುವ ಕಾರ್ಖಾನೆಯಿದೆ.ಇಲ್ಲಿ ಪ್ರತಿ ವಾರ ಸರಿಸುಮಾರು 2 ಕೋಟಿ ಸೊಳ್ಳೆಗಳನ್ನು ಉತ್ಪತ್ತಿ ಮಾಡಲಾಗುತ್ತದೆ.ಬಳಿಕ ಸೊಳ್ಳೆಗಳನ್ನು ವೊಲ್ಬಾಚಿಯಾ ಬ್ಯಾಕ್ಟೀರಿಯಾದ ಸೋಂಕಿಗೆ ಒಳಪಡಿಸಲಾಗುತ್ತದೆ.

ಬ್ಯಾಕ್ಟೀರಿಯಾದಿಂದ ಸೋಂಕಿತ ಸೊಳ್ಳೆಗಳು ಉತ್ಪತ್ತಿಯಾದರೆ, ಅವು ಹೆಣ್ಣು ಸೊಳ್ಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಬಂಜೆತನವನ್ನು ಮಾಡುತ್ತದೆ ಎನ್ನಲಾಗುತ್ತದೆ.ಡೆಂಗ್ಯೂ ನಿಯಂತ್ರಣಕ್ಕೆ ಈ ರೀತಿ ಸೊಳ್ಳೆಗಳ ನಾಶಕ್ಕೆ ಈ ರೀತಿ ಕಾರ್ಖಾನೆಯಲ್ಲಿ ಸೊಳ್ಳೆಗಳ ಉತ್ಪಾದನೆ ಮಾಡಲಾಗುತ್ತದೆ.2015ರಿಂದಲೇ ಚೀನಾ ಈ ರೀತಿ ಸೊಳ್ಳೆಗಳ ಮೂಲಕ ಸೊಳ್ಳೆಗಳ ನಿರ್ಣಾಮ ಮಾಡುತ್ತದೆ ಎಂದು ತಿಳಿದು ಬಂದಿದೆ.