ಮುಲ್ಕಿ ನಾರಾಯಣ ಗುರು ಪಾರ್ಕ್ ಗೆ ಬೀಗ ಹಾಕಲು ಸೂಚನೆ ;ಮೀನುಗಾರರು ಗರಂ; ಮೂಲೆ ಸೇರಿದ ನಾಮಫಲಕ

ಮುಲ್ಕಿ:ಮುಲ್ಕಿಯ ಕೊಳಚಿಕಂಬಳದಲ್ಲಿ ಒಂದು ಸುಂದರವಾದ ನಾರಾಯಣ ಗುರು ಪಾರ್ಕ್ ನ್ನು ಹಲವಾರು ಜನರು ಬಳಸಿಕೊಳ್ಳುತ್ತಾರೆ.ಅದರಲ್ಲಿ ಹಿರಿಯ ನಾಗರಿಕರು ಸಂಜೆಯ ಹೊತ್ತಿನಲ್ಲಿ ವಿಶ್ರಾಂತಿಗಾಗಿ  ಬರುತ್ತಾರೆ. ಅಲ್ಲದೇ ಮಕ್ಕಳು, ಮಹಿಳೆಯರು  ಕೂಡ ಕುಟುಂಬದ ಸಮೇತವಾಗಿ ಬರುತ್ತಾರೆ. 

 ಮೀನುಗಾರಿಕೆ ತೊಡಗಿಕೊಳ್ಳುವ ಎಲ್ಲರೂ ಇದೇ ಪಾರ್ಕ್ ಗೆ ಬರುತ್ತಾರೆ. ಅಷ್ಟಕ್ಕೂ ಮೀನುಗಾರರು ಈ ನಾರಾಯಣಗುರು ಪಾರ್ಕ್ಗೆ ಬರುವುದು ಯಾಕೆಂದರೆ ಇದು ಹಿಂದಿನಿಂದಲೂ ಮುಲ್ಕಿಯ ಮಿನಿಬಂದರು ಆಗಿತ್ತು. ನಂತರದ ದಿನಗಳಲ್ಲಿ ಮೀನುಗಾರಿಕೆ ಇಲಾಖೆಯ ಜಾಗದಲ್ಲಿ ಈ ಪಾರ್ಕ್ ನಿರ್ಮಾಣ ಮಾಡಿದ್ದಾರೆ. ಇದು ಸಣ್ಣ ಮೀನುಗಾರರು ಹಲವಾರು ಮಂದಿ ಇಲ್ಲಿ ತಮ್ಮ ದೋಣಿಯನ್ನು ನಿಲ್ಲಿಸುವ ಜಾಗವಾಗಿದೆ. ದ್ರೆ ವಿಪರ್ಯಾಸ ಎಂದರೆ ಮೀನುಗಾರಿಕೆ ಇಲಾಖೆಯ ಜಾಗದಲ್ಲಿ ಮುಲ್ಕಿ ನಗರ ಪಂಚಾಯತ್ ಅನಧಿಕೃತವಾಗಿ ಈ ಪಾರ್ಕ್ ನಿರ್ಮಾಣ ಮಾಡಿದೆ ಎಂದು ಇಲ್ಲಿನ ಸ್ಥಳೀಯರ ಮಾತು.ಈ ಹಿಂದೆ ಮಾನಿಷ್ ಕ್ರಿಕೆಟರ್ಸ್ ಎಂಬ ಯುವಕರ ತಂಡ ಈ ಬಂದರು ಜಾಗಕ್ಕೆ ಐವತ್ತಕ್ಕೂ ಹೆಚ್ಚು ಲೋಡು ಮಣ್ಣು ಹಾಕಿ ಸಣ್ಣ ಮೀನುಗಾರರಿಗೆ ಸಹಾಯ ಮಾಡುವ ದೃಷ್ಟಿಯಿಂದ ಈ ಕೆಲಸವನ್ನು ಮಾಡಿದೆ.  ಮುಲ್ಕಿ ನಗರ ಪಂಚಾತ್ ನಂತರ ಅದೇ ಜಾಗದಲ್ಲಿ ನಾರಾಯಣ ಗುರು ಪಾರ್ಕ್ ಮಾಡಿದೆ ಇದರಲ್ಲಿ ಹಣ ಅವ್ಯವಹಾರ ಆಗಿದೆ ಎಂಬುದು ಗ್ರಾಮಸ್ಥರ ದೂರು. 

 ಇದೀಗ ಈ ಪಾರ್ಕ್ ಗೆ ಬೀಗ ಹಾಕುವಂತೆ ಮುಲ್ಕಿ ನಗರಪಂಚಾಯತ್ ನ ಮುಖ್ಯ ಅಧಿಕಾರಿ ಒಬ್ಬರು ಬಂದು ಬೀಗ ಹಾಕಿ ಎಂದು ಹೇಳಿದಾಗ ಸ್ಥಳೀಯರ ಜೊತೆಗೆ ಮಾತಿನ ಚಕಮಕಿ ನಡೆಯಿತು. ನಂತರ ಅಲ್ಲಿಂದ ಮುಖ್ಯ ಅಧಿಕಾರಿ ತೆರಳಿದ್ದಾರೆ. ನಾರಾಯಣಗುರು ಪಾರ್ಕ್‌ ನಲ್ಲಿ ಮೀನುಗಾರಿಕೆ ಇಲಾಖೆಯ ಒಂದು ಮೀನು ಸಾಕಣೆಯ ಗೂಡು ಇರಿಸಲಾಗಿದೆ. ಅದನ್ನು ತೆಗೆಯದೆ ಇದ್ದರೆ ತೆಗೆದು ನದಿಗೆ ಎಸೆಯಲು ಹೇಳಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮೀನುಗಾರರು ಮಾಧ್ಯಮಕ್ಕೆ ತಿಳಿಸಿದರು. ಈ ನಾರಾಯಣಗುರು ಪಾರ್ಕ್ ನ ನಾಮಫಲಕ  ಮೂಲೆ ಸೇರಿದೆ. ಜನರು ಬಳಸದಂತೆ ಬೀಗ ಹಾಕುವುದಾದರೆ ಈ ಪಾರ್ಕ್  ಯಾರಿಗೆ..? ಅಧಿಕಾರಿಗಳು ಬಂದು ವಿಶ್ರಾಂತಿ ಪಡೆಯಲು ಆಗಿರಬಹುದೇ..? ಜನರ ಹಣವನ್ನು ಬಳಸಿದ ಈ ಪಾರ್ಕ್ ನಿರ್ಮಾಣ ಮಾಡಿದ್ದು ಯಾರಿಗೆ..?  ಯೋಜನೆ ಹೆಸರಲ್ಲಿ ಹಣವನ್ನು ಲೂಟಿ ಮಾಡುವ ಯೋಜನೆಯ  ಪಾರ್ಕ್..!?  ಎಲ್ಲಾ ಪ್ರಶ್ನೆಗೆ ಉತ್ತರ ಇಲ್ಲಿ ಜನ ಪ್ರತಿನಿಧಿಗಳು, ಮುಲ್ಕಿ ನಗರಪಂಚಾಯತ್ ನ ಮುಖ್ಯ ಅಧಿಕಾರಿ ನೀಡಬೇಕಾಗಿದೆ. 
  • ಈ ಸಮಸ್ಯೆಯನ್ನು ಮೀನುಗಾರರು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಈ ಸಮಸ್ಯೆಗೆ ಮೀನುಗಾರಿಕಾ ಇಲಾಖೆ ಸ್ಪಂದಿಸಿ ತಕ್ಷಣವೇ ಭೇಟಿ ನೀಡಿದ ಇಲಾಖಾಧಿಕಾರಿಗಳು ಮೀನುಗಾರರ ಜೊತೆಗೆ ನಾವಿದ್ದೇವೆ ಎಂದರು. ಈ ಜಾಗ ಮೀನುಗಾರಿಕೆ ಇಲಾಖೆಗೆ ಸೇರಿದು ಇಲ್ಲಿ ಮೀನುಗಾರಿಕೆ ಮಾಡುವ ಎಲ್ಲಾ ಜನರಿಗೆ ಹಕ್ಕು ಇದೆ ಎಂದು ತಿಳಿಸಿದರು. ನಗರ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ಇಲ್ಲದೇ ಇರಬಹುದು ಎಂದರು. 

ಜನ ಪ್ರತಿನಿಧಿಗಳು ಮುಲ್ಕಿ ಮೀನುಗಾರರ ಸಮಸ್ಯೆಗೆ,ನಾರಾಯಣ ಗುರು ಪಾರ್ಕ್ ನ್ನು ಜನರು ಬಳಸುವಂತೆ  ಇರುವ ಸಮಸ್ಯೆ ಯನ್ನು  ಬಗೆಹರಿಸಬೇಕಾಗಿದೆ.

ಕಾಮೆಂಟ್ ಬಿಡಿ

Join Us