ಕ್ರೀಡಾ ಸುದ್ದಿ

ಉದ್ಘಾಟನಾ ಪಂದ್ಯದಲ್ಲೇ ಆರ್​ಸಿಬಿ ಆಡುತ್ತಿರೋದ್ರಿಂದ ಅಭಿಮಾನಿಗಳಿಗೆ ಬಿಗ್ ಶಾಕ್

ಬೆಂಗಳೂರು:ಕ್ರಿಕೆಟ್ ಪ್ರೇಮಿಗಳಲ್ಲಿ ಐಪಿಎಲ್​ ಫೀವರ್​ ನಿಧಾನಕ್ಕೆ ಶುರುವಾಗುತ್ತಿದೆ. ಉದ್ಘಾಟನಾ ಪಂದ್ಯದಲ್ಲೇ ಆರ್​ಸಿಬಿ ಆಡುತ್ತಿರೋದ್ರಿಂದ ಆರ್​ಸಿಬಿ ಅಭಿಮಾನಿಗಳು ಮತ್ತಷ್ಟು ಎಕ್ಸೈಟ್ ಆಗಿದ್ದರು. ಆದರೆ ಆರ್​ಸಿಬಿ ಫ್ರಾಂಚೈಸಿ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಪಂದ್ಯಗಳಿಗೆ ದುಪ್ಪಟ್ಟು ಹಣ ವಿಧಿಸಿದೆ. ಪಂದ್ಯಾವಳಿಯ ಆರಂಭದ ದರವೇ 2300 ರೂಪಾಯಿ ನಿಗದಿ ಮಾಡಿದೆ. ಅಲ್ಲದೇ 42,000 ವರೆಗೂ ಟಿಕೆಟ್​ನ ಬೆಲೆ ಏರಿಸಿದೆ. ಟಿಕೆಟ್ ಬೆಲೆ ನೋಡಿದ ಸಾಮಾನ್ಯ ಆರ್​ಸಿಬಿ ಅಭಿಮಾನಿಗಳು ಕಂಗಾಲ್ ಆಗಿದ್ದಾರೆ. ಆರ್​ಸಿಬಿ ತಂಡದ ನಿರ್ವಾಹಕರು ಮತ್ತು ಮಾಲೀಕರು ಟಿಕೆಟ್ ಬೆಲೆ ಕಡಿಮೆ ಮಾಡಬೇಕು ಅಂತಾ ಆಗ್ರಹಿಸಿದ್ದಾರೆ.

ಈ ಸಂಬಂಧ RCB ಅಧ್ಯಕ್ಷರಿಗೆ ಕನ್ನಡ ಚಳವಳಿ ಕೇಂದ್ರ ಸಮಿತಿಯ ಮುಖ್ಯಸ್ಥ ಗುಗುರುದೇವ್ ನಾರಾಯಣಕುಮಾರ್ ಪತ್ರ ಬರೆದಿದ್ದಾರೆ. ಬೆಂಗಳೂರು ಕ್ರಿಕೆಟ್ ಪ್ರೇಮಿಗಳ ದೊಡ್ಡ ಬಳಗವನ್ನೇ ಹೊಂದಿರುವ ನಗರ. ಹೆಸರಾಂತ, ವಿಶ್ವಮಟ್ಟದ ಕ್ರಿಕೆಟ್ ಆಟಗಾರರ ಕೊಡುಗೆಯನ್ನು ಬೆಂಗಳೂರು ಕೊಟ್ಟಿದೆ. ಐಪಿಎಲ್ ಪಂದ್ಯಾವಳಿಗಳು ಆರಂಭವಾದ ಮೇಲೆ RCBಗೆ ಅಗಾಧ ಅಭಿಮಾನಿ ಬಳಗ ಇದೆ. ಸ್ಥಳೀಯ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ದೊಡ್ಡ ಬಳಗ ಇದೆ. ಸಾಮಾನ್ಯ ಅಭಿಮಾನಿಯೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನೋಡಬೇಕು ಅಂತಾ ಅಪೇಕ್ಷೆ ಪಡ್ತಾನೆ.

ಆದರೆ ದರ ಏರಿಕೆಯ ಬರೆ ಕಂಡು ಟಿಕೆಟ್ ಪ್ರೇಮಿಗಳು ಶಾಕ್ ಆಗಿದ್ದಾರೆ. ರಣ ರೋಚಕ ಪಂದ್ಯಗಳ ವೀಕ್ಷಿಸಲು ಹೈಟಿಕೆಟ್ ರೇಟ್ ವಿಧಿಸಲಾಗಿದೆ. ಕೂಡಲೇ ಟಿಕೆಟ್ ಬೆಲೆ ಕಡಿಮೆ ಮಾಡಿ, ಸಾಮಾನ್ಯ ಅಭಿಮಾನಿಗಳು ಕೂಡ ಕ್ರಿಕೆಟ್ ವೀಕ್ಷಣೆ ಮಾಡುವಂತಾಗಲಿ ಎಂದು ಆಗ್ರಹಿಸಿದ್ದಾರೆ.

ಕಾಮೆಂಟ್ ಬಿಡಿ

Join Us