ಉಡುಪಿ :ಅನೈತಿಕ ವೇಶ್ಯಾವಾಟಿಕೆ ಮನೆಗೆ ಮಣಿಪಾಲ ಇನ್ಸ್ಪೆಕ್ಟರ್ ದೇವರಾಜ್‌ ಟಿ.ವಿ ನೇತೃತ್ವದಲ್ಲಿ ದಾಳಿ .

Illegal Prostitution

ಉಡುಪಿ:ಅನೈತಿಕ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಗೆ ದಾಳಿ ನಡೆಸಿದ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದ ಘಟನೆ ತಾಲೂಕಿನ ಹೆರ್ಗಾ ಗ್ರಾಮದಲ್ಲಿ ನಡೆದಿದೆ.

ಅ.2 ರಂದು ಖಚಿತ ಮಾಹಿತಿಯಂತೆ ಮಣಿಪಾಲ ಇನ್ಸ್ಪೆಕ್ಟರ್ ದೇವರಾಜ್‌ ಟಿ.ವಿ ನೇತೃತ್ವದಲ್ಲಿ ಹೆರ್ಗಾ ಗ್ರಾಮದ ಸರಳೇಬೆಟ್ಟಿನ ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಶಿವರಾಜ(38) ಮಂಡ್ಯ ಮತ್ತು ನಿಂಗಪ್ಪ ಅಂಬಿಗೇರಾ(29) ಬಾಗಲಕೋಟೆ ಎಂಬರನ್ನು ವಶಕ್ಕೆ ಪಡೆಯಲಾಗಿದೆ. ಇನ್ನೊರ್ವ ಆಪಾದಿತ ನವೀನ್‌ಗೌಡ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಇದೇ ವೇಳೇ ಆರೋಪಿಗಳ 2 ಮೊಬೈಲ್‌ ಪೋನ್‌ಗಳು, ನಗದು 15000 ರೂ, ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಹಣಗಳಿಸುವ ಉದ್ದೇಶದಿಂದ ಹುಡುಗಿಯರನ್ನು ಪುಸಲಾಯಿಸಿ ಕರೆ ತಂದು ಅವರಿಗೆ ಬಲವಂತಾಗಿ ಪುರುಷರನ್ನು ಒದಗಿಸಿ ಅನೈತಿಕ ಚಟುವಟಿಕೆ ನಡೆಸುತ್ತಿರುವ ಆರೋಪವು ಆರೋಪಿಗಳ ಮೇಲಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 257/2023 ಕಲಂ: 370 (A) (2) IPC & 3, 4, 5, 6, ITP ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.