ರಾಹುಲ್ ಗಾಂಧಿಯವರ ಜೋಡೋ ಭಾರತ್ ಯಾತ್ರೆ ಬಿಜೆಪಿಗರ ನಿದ್ರೆ ಕೆಡಿಸಿದೆ: ಅಭಯ್ ಚಂದ್ರ ಜೈನ್

ಮುಲ್ಕಿ: ಕಾಂಗ್ರೆಸ್ಸಿನ ಯುವ ನಾಯಕ ರಾಹುಲ್ ಗಾಂಧಿಯವರ  ಭಾರತ್ ಜೋಡೊ ಪಾದಯಾತ್ರೆಯು ಕರ್ನಾಟಕದಲ್ಲೂ ಸಂಚರಿಸಿಸ ಲಿದ್ದು, ಅಕ್ಟೋಬರ್ 8ರಂದು ನಾಗಮಂಡಲ ಹಾಗೂ ತುರುವೇಕೆರೆ ಪ್ರದೇಶದಲ್ಲಿ ಯಾತ್ರೆ ಹಾದು ಹೋಗುವ ಸಂದರ್ಭ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಿಂದ 500 ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಮಿಥುನ್ ರೈ ನುಡಿದರು.

ಅವರು ಈ ಬಗ್ಗೆ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ಲಾಕ್ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಯಾತ್ರೆಯ ರೂಪ ರೇಖೆಗಳನ್ನು ವಿವರಿಸಿ ಮಾತನಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ಸರಕಾರದ ಮಾಜಿ ಸಚಿವರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ಕೆ ಅಭಯ್ ಚಂದ್ರ ಜೈನ್ ಮಾತನಾಡಿ ರಾಹುಲ್ ಗಾಂಧಿಯವರ ಜೋಡೋ ಭಾರತ್ ಯಾತ್ರೆ, ಬಿಜೆಪಿಗರ ನಿದ್ರೆ ಕೆಡಿಸಿದೆ. ಕಾರ್ಯಕರ್ತರು ರಾಹುಲ್ ಗಾಂಧಿಯವರ ಯಾತ್ರೆಯನ್ನು ಸದುಪಯೋಗ ಮಾಡಿಕೊಂಡು ಪಕ್ಷ ಸಂಘಟನೆಗೆ ಒತ್ತು ನೀಡಬೇಕೆಂದು ಕರೆ ನೀಡಿದರು.

truenews

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕ್ಷೇತ್ರ ಉಸ್ತುವಾರಿ ಶ್ರೀಮತಿ ಮಮತಾ ಗಟ್ಟಿ ಮಹಿಳೆಯರ ಭಾಗವಹಿಸುವಿಕೆಯ ಬಗ್ಗೆ ಮಾತನಾಡಿದರು.ಈ ಮಧ್ಯೆ ಯಾತ್ರೆ ಪ್ರಾರಂಭಗೊಂಡ ಆರು ದಿನ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಸೇವಾದಳ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಿದ ಶ್ರೀ ಧರ್ಮಾನಂದ ಶೆಟ್ಟಿಗಾರ್ ರವರನ್ನು ಶಾಲು ಹೊದಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕೆಪಿಸಿಸಿ ಕಾರ್ಡಿನೇಟರ್ ವಸಂತ್ ಬರ್ನಾಡ್, ಬ್ಲಾಕ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಟಿ ಎಚ್ ಮೈಯದಿ, ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾ, ಮುಲ್ಕಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ, ನಾಯಕರುಗಳಾದ ಯೋಗೀಶ್ ಕೋಟ್ಯಾನ್ ಸಾಹುಲ್ ಹಮೀದ್, ಬಿಜೆ ರಹೀಮ್, ಹರಿಯಪ್ಪ ಸಾಲಿಯಾನ್, ಶೈಲಾಸಿಕ್ವೇರಾ, ಅನಿತಾ ಡಿಸೋಜಾ, ಸುಜಾತ ಭಟ್, ದೀಪಕ್ ಪೆರ್ಮೂದೆ, ಜನಾರ್ಧನ್ ಬಂಗೇರ, ಮಂಜುನಾಥ ಕಂಬಾರ ಅಬ್ದುಲ್ ಖಾದರ್ ಅಬ್ದುಲ್ ಅಜೀಜ್ , ಕಿರಣ್ ಶೆಟ್ಟಿ , ಬಶೀರ್ ಕುಳಾಯಿ ಮೊದಲಾದವರು ಉಪಸ್ಥಿತರಿದ್ದರು.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.