ಬೆಂಗಳೂರು: ಕೊರೊನಾ ಕಾಲದಲ್ಲಿ ಮೊಬೈಲ್ ಬಳಕೆ ಹೆಚ್ಚಾದ ಹಿನ್ನೆಲೆ ಮಕ್ಕಳು ಕೆಟ್ಟ ಚಟಕ್ಕೆ ತುತ್ತಾಗಿದ್ದಾರೆ. ಮಕ್ಕಳ ಕೈಗೆ ಸುಲಭವಾಗಿ ಮೊಬೈಲ್ ಸಿಗುತ್ತಿರುವ ಹಿನ್ನೆಲೆ ಪೋಷಕರ ಕಣ್ತಪ್ಪಿಸಿ ಪೋರ್ನೋಗ್ರಫಿ ವೆಬ್ಸೈಟ್ ಸರ್ಚ್ ಮಾಡುತ್ತಿದ್ದಾರೆ. ಗೆಳೆಯರ ವಾಟ್ಸಾಪ್, ಇನ್ಸ್ಟಾಗ್ರಾಮ್ ಮೂಲಕ ವಿಡಿಯೋ ಮತ್ತು ಅದಕ್ಕೆ ಸಂಬಂಧಿಸಿದ ಲಿಂಕ್ಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಫ್ರೆಂಡ್ಸ್ ಗ್ರೂಪ್ಗಳಿಂದಲೂ ಸುಲಭವಾಗಿ ಪೋರ್ನೋಗ್ರಫಿ ನೋಡಲು ಸಿಗುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅಶ್ಲೀಲ ವಿಡಿಯೋ ನೋಡುವದರಿಂದ ಮೆದುಳಿನಲ್ಲಿರುವ ಡೋಪಮೈನ್ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಇದರ ಪರಿಣಾಮ ಮಕ್ಕಳ ದೈಹಿಕ ಮತ್ತು ಮಾನಸಿಕವಾಗಿ ಬದಲಾವಣೆಗಳು ಆಗುತ್ತಿವೆ ಎಂದು ತಜ್ಞರು ಹೇಳುತ್ತಾರೆ. ಈ ಹಿನ್ನೆಲೆ ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನ ನೀಡಬೇಕು. ಮಕ್ಕಳು ಮೊಬೈಲ್ನಲ್ಲಿ ಏನ್ ಮಾಡ್ತಾರೆ? ಯಾವ ರೀತಿಯ ವಿಡಿಯೋಗಳನ್ನ ನೋಡ್ತಾರೆ ಎಂಬುದರ ಬಗ್ಗೆ ಕಣ್ಣಿರಿಸುವಂತೆ ಸಲಹೆ ನೀಡಿದ್ದಾರೆ..