ಪಾಕಿಸ್ತಾನ:ರಾವಲ್ಪಿಂಡಿಯಲ್ಲಿ ಆರಂಭವಾಗಬೇಕಿರುವ ಮೊದಲ ಟೆಸ್ಟ್‌ಗೂ ಮುನ್ನ ಇಂಗ್ಲೆಂಡ್ ತಂಡದ 14 ಆಟಗಾರರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ಮೊದಲ ಪಂದ್ಯಕ್ಕೆ ತೊಡಕಾಗಲಿದೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್ಸ್ಟನ್, ಮೊಯಿನ್ ಅಲಿ ಸೇರಿ 14 ದಿಗ್ಗಜ ಆಟಗಾರರ ಆರೋಗ್ಯ ಹಠಾತ್ ಹದಗೆಟ್ಟಿದ್ದು, ಈ ಆಟಗಾರರು ಆಡುವ ಸ್ಥಿತಿಯಲ್ಲಿಲ್ಲ ಎಂದು ವರದಿಯಾಗಿದೆ.
ಪಾಕ್ ಪ್ರವಾಸದ ಒಟ್ಟು ತಂಡದಲ್ಲಿರುವ ಕೇವಲ 5 ಆಟಗಾರರು ಮಾತ್ರ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.ಮೊದಲ ಟೆಸ್ಟ್ಗಾಗಿ ಇಂಗ್ಲೆಂಡ್ ಮಂಡಳಿ ಮಂಗಳವಾರವೇ ತನ್ನ ತಂಡವನ್ನು ಪ್ರಕಟಿಸಿತ್ತು.ಆದರೆ ಪ್ರಕಟಿಸಿದ 11 ಆಟಗಾರರ ತಂಡದಲ್ಲಿ ಬರೋಬ್ಬರಿ 7 ಆಟಗಾರರು ಈಗ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ತಂಡದ 13 ರಿಂದ 14 ಸದಸ್ಯರು ಅನಾರೋಗ್ಯದ ಲಕ್ಷಣಗಳಿಂದ ಬಳಲುತ್ತಿದ್ದಾರೆ ಎಂದು ಇಂಗ್ಲೆಂಡ್ ವಕ್ತಾರರು ದೃಢಪಡಿಸಿದ್ದಾರೆ.