ದಕ್ಷಿಣ ಕನ್ನಡ: ಉಡುಪಿಯಲ್ಲಿ ಹಿಜಾಬ್ಗೆ ಸಂಬಂಧಿಸಿದಂತೆ ಈ ಹಿಂದೆ ತೀವೃ ವಿರೋಧ ವ್ಯಕ್ತವಾಗಿತ್ತು. ಅದಾದ ನಂತರ ಮುಸ್ಲಿಂ ವಿದ್ಯಾರ್ಥಿನಿಯರಿಗೆಂದೇ ಪ್ರತ್ಯೇಕ ಕಾಲೇಜು ನಿರ್ಮಾಣ ಮಾಡಲು ಇದೀಗ ಸರ್ಕಾರ ಅನುಮತಿ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್ ಕಣ್ಣೂರಿನ 16 ಎಕರೆ ಜಾಗವನ್ನು ಮೀಸಲಿಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಇನ್ನೂ ಬೇರೆ ಕಡೆಗಳಲ್ಲಿ ಕಾಲೇಜು ಸ್ಥಾಪಿಸುವ ಉದ್ದೇಶ ಹೊಂದಿದೆ. ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದ ಕೆಲವೆಡೆ ಕಾಲೇಜು ಆರಂಭಿಸಲಾಗುತ್ತದೆ.
ಸರ್ಕಾರ ಅನುಮತಿ ನೀಡಿರುವ ಸಲುವಾಗಿ ಇದೀಗ ಹಿಂದೂ ಸಂಘಟನೆಗಳು ತಮಗೂ ಗುರುಕುಲ ಪದ್ಧತಿಯ ಶಾಲೆಗಳ ನಿರ್ಮಾಣವಾಗಬೇಕು. ತಮಗೂ ಪ್ರತ್ಯೇಕ ಶಾಲೆ ಬೇಕು ಎಂದು ಆಗೃಹಿಸುತ್ತಿದ್ದಾರೆ. ಸರ್ಕಾರದ ಯೋಜನೆಗೆ ಹಿಂದೂ ಪರ ಸಂಘಟನೆಗಳ ಆಕ್ರೋಶವ್ಯಕ್ತಪಡಿಸುತ್ತಿವೆ. ಹಿಂದೂ ಗುರುಕುಲವನ್ನು ತೆರೆಯಲೂ ಅವಕಾಶ ನೀಡಿ. ಹಿಂದುತ್ವದ ಮುಖವಾಡವನ್ನು ಹಾಕಿ ಮೋಸ ಮಾಡಬೇಡಿ ಎಂದು ಧ್ವನಿ ಎತ್ತಿದ್ದಾರೆ.ಸರ್ಕಾರ ಈ ಯೋಜನೆ ಅನುಷ್ಠಾನಗೊಳಿಸಿದರೆ ಹೋರಾಟದ ಎಚ್ಚರಿಕೆ ನೀಡಿರುವ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಈ ಕುರಿತು ತೀವೃ ಆಕ್ರೋಶ ವ್ಯಕ್ತಪಡಿಸಿದ್ದಾರೆ.