ಮುಸ್ಲಿಂ ಸಮುದಾಯದ ವಿದ್ಯಾರ್ಥಿಯನ್ನು ಕಸಬ್‌ ಎಂದು ಸಂಬೋಧಿಸಿದನ್ನು ಸಮರ್ಥಿಸಿಕೊಂಡ ಸಚಿವ ಬಿ.ಸಿ.ನಾಗೇಶ್‌

ಉಡುಪಿ:  ಮಣಿಪಾಲದ ಮಾಹೆ ವಿವಿಯ ಎಂಐಟಿ ಕಾಲೇಜಿನಲ್ಲಿ ಶಿಕ್ಷಕನೋರ್ವ ತರಗತಿಯಲ್ಲಿ ಪಾಠ ಮಾಡುವ ವೇಳ ಮುಸ್ಲಿಂ ಸಮುದಾಯದ ವಿದ್ಯಾರ್ಥಿಯನ್ನು ಕಸಬ್‌ ಎಂದು ಸಂಬೋಧಿಸಿದ ವಿಡಿಯೋಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಪ್ರತಿಕ್ರಿಯಿಸಿದ್ದು ಇದು ದೊಡ್ಡ ವಿಷಯವಲ್ಲ ಎಂದು ಹೇಳುವ ಮೂಲಕ ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ. ಬಹುತೇಕ ಎಲ್ಲರೂ ರಾವಣ ಅಥವಾ ಶಕುನಿ ಎಂಬ ಪದಗಳನ್ನು ಪ್ರತಿನಿತ್ಯ ಬಳಸುತ್ತೇವೆ. ವಿಧಾನಸಭೆಯಲ್ಲಿಯೂ ಸಹ ನಾವು ಅನೇಕ ಬಾರಿ ಈ ರೀತಿ ಮಾತನಾಡಿದ್ದೇವೆ. ಅದು ಸಮಸ್ಯೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಕಸಬ್‌ ಬಗ್ಗೆ ಮಾತನಾಡಿದರೆ ಯಾಕಿಷ್ಟು ಸಮಸ್ಯೆಯಾಗುತ್ತದೆ 26/11 ಮುಂಬೈ ದಾಳಿಯ ಬಳಿಕ ಸೆರೆಹಿಡಿಯಲಾದ ಏಕೈಕ ಭಯೋತ್ಪಾದಕ ಕಸಬ್‌ ಆತನನ್ನು ಗಲ್ಲಿಗೇರಿಸಲಾಗಿದೆ ಎಂದು ಮಾತನಾಡುವ ವೇಳೆ ವಿವರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಮಾಹೆ ವಿವಿಯೂ ಶಿಕ್ಷಕನನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದೆ ಮತ್ತು ಆಂತರಿಕ ತನಿಖೆ ನಡೆಸುವಂತೆ ಸಿಬ್ಬಂದಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.