ಮಳೆಗಾಲದ ಅಧಿವೇಶನಕ್ಕೆ ಬಾರದ ಬಿಜೆಪಿಯ ಕೆಲ ಹಿರಿಯ ಸಚಿವಾಕಾಂಕ್ಷಿ ಶಾಸಕರು..!?

ಬೆಂಗಳೂರು: ಆಡಳಿತ ಪಕ್ಷಕ್ಕೆ ಈ ಸಮಸ್ಯೆ ಎದುರಾಗಲು ಪ್ರಮುಖ ಕಾರಣ, ಇನ್ನೂ ಆಗದ ಸಂಪುಟ ವಿಸ್ತರಣೆ. ಇಂತದ್ದೊಂದು ವಿಚಾರವೀಗ ವಿಧಾನಸೌಧದ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಇದಕ್ಕೆ ಪೂರಕವೆನ್ನುವಂತೆ ಮಳೆಗಾಲದ ಅಧಿವೇಶನ ನಾಲ್ಕನೇ ದಿನಕ್ಕೆ ಕಾಲಿಟ್ಟರೂ ಬಿಜೆಪಿಯ ಕೆಲ ಹಿರಿಯ ಹಾಗೂ ಸಚಿವಾಕಾಂಕ್ಷಿ ಶಾಸಕರು ಸದನದ ಕಡೆ ಮುಖ ಮಾಡದೆ ಕುಳಿತಿದ್ದಾರೆ. ಮರಳಿ ಸಚಿವರಾಗುವ ಆಸೆ ಹೊತ್ತಿದ್ದ ಕೆ.ಎಸ್. ಈಶ್ವರಪ್ಪ, ರಮೇಶ್ ಜಾರಕಿಹೊಳಿ, ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ತಿಪ್ಪಾರೆಡ್ಡಿ, ಕರುಣಾಕರ ರೆಡ್ಡಿ, ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ್ ಮಾಮನಿ, ರಾಜುಗೌಡ ನಾಯಕ್, ಎ.ರಾಮದಾಸ್ ಸೇರಿದಂತೆ ಅನೇಕರು ಸದನದಿಂದ ದೂರ ಉಳಿದಿದ್ದಾರೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.