ಕಬಡ್ಡಿ ಆಡುತ್ತಿದ್ದ ವೇಳೆ ಕುಸಿದು ಬಿದ್ದು ಯುವಕ ಮೃತ..!

ತಮಿಳುನಾಡು: ಕಬಡ್ಡಿ ಆಡುತ್ತಿದ್ದ ವೇಳೆ ಕುಸಿದು ಬಿದ್ದು ಯುವಕ ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಬಡ್ಡಿ ಆಟಗಾರ ವಿಮಲ್  ಮೃತಪಟ್ಟವರು ಎಂದು ಗುರುತಿಸಲಾಗಿದ್ದು,  ನಿನ್ನೆ ಕಡಲೂರಿನ ಕಡಂಪುಲಿಯೂರಿನಲ್ಲಿ ನಡೆದ ರಾಜ್ಯ ಕಬಡ್ಡಿ ಸ್ಪರ್ಧೆಯಲ್ಲಿ ಈ ಘಟನೆ ನಡೆದಿದೆ. ಪಂದ್ಯದ ವೇಳೆ ಎದುರಾಳಿ ತಂಡದ ಸದಸ್ಯರು ವಿಮಲ್ ಅವರನ್ನು ಟ್ಯಾಕಲ್ ಮಾಡುತ್ತಿದ್ದಾಗ ವಿಮಲ್ ಗೊಂದಲಗೊಂಡು ನೆಲದ ಮೇಲೆ ಕುಸಿದು ಬಿದ್ದಿದ್ದು, ಮೇಲಕ್ಕೆ ಏಳಲು ಯತ್ನಿಸಿದರೂ ಎದ್ದು ನಿಲ್ಲಲಾಗದೇ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಇನ್ನೂ ವಿಡಿಯೋದಲ್ಲಿ ಕಂಡು ಬರುತ್ತಿರುವಂತೆ ಸಹ ಆಟಗಾರನ ಮಂಡಿ ವಿಮಲ್ ನ ಎದೆಗೆ ಬಡಿದಿದ್ದು, ಇದರಿಂದ ಅವರು ಗಂಭೀರಗೊಂಡರೇ ಎನ್ನುವ ಅನುಮಾನಗಳು ಕೂಡ ಕೇಳಿ ಬಂದಿವೆ.

ಘಟನೆ ಸಂಬಂಧ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಪೋಸ್ಟ್ ಮಾರ್ಟಮ್ ವರದಿ ಬಂದ  ಬಳಿಕ ಸಾವಿನ ಅಸಲಿ ಕಾರಣ ಬಯಲಾಗಬೇಕಿದೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.