ಕಾಂಗ್ರೆಸ್ ತೊರೆದು ಬಿಜೆಪಿಯತ್ತ ನಟಿ, ಮಾಜಿ ಸಂಸದೆ ರಮ್ಯಾ ಹೆಜ್ಜೆ ..!?

ಮಂಡ್ಯ: ಮಂಡ್ಯ ಎಂ ಪಿ ಕಣದಲ್ಲಿ ಈ ಬಾರಿ ರಂಗಿನ್ ಪಾಲಿಟಿಕ್ಸ್ ನಡೆಯಲಿದ್ದು, ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಮೋಹಕ ತಾರೆ ರಮ್ಯಾ. ಈಗಾಗಲೇ ಕಾಂಗ್ರೆಸ್ ನಿಂದ ಒಂದು ಹೆಜ್ಜೆ ಹೊರಗೆ ಇಟ್ಟಿರುವ ರಮ್ಯಾ,  ಬಿಜೆಪಿ ಸೇರಲು ವೇದಿಕೆ ರೆಡಿಯಾಗ್ತಿದೆ. ಸುಮಲತಾರನ್ನು ಪಕ್ಷಕ್ಕೆ ಸೆಳೆಯಲು ವಿಫಲವಾಗಿ ಬಿಜೆಪಿ ಹೊಸ ದಾಳ ಸಿದ್ದ ಪಡೆಸುತ್ತಿದೆ.  ಸುಮಲತಾ ಎದುರು ರಮ್ಯಾ ನಿಲ್ಲಿಸಿ ಮಂಡ್ಯ ಕ್ಷೇತ್ರ ಗೆಲ್ಲಲು ಬಿಜೆಪಿ ರಣತಂತ್ರ ಹೂಡಿದೆ. ರಮ್ಯಾ ನಿಲ್ಲಿಸಿದರೆ ಮಂಡ್ಯ ಗೆಲ್ಲುವುದು ಫಿಕ್ಸ್ ಎಂದು ಬಿಜೆಪಿಗರ ತೀರ್ಮಾನ ಮಾಡಿದ್ದು, ಕಾಂಗ್ರೆಸ್ ನಲ್ಲಿ ಅಸಮಾಧಾನಗೊಂಡು ದೂರ ಇರುವ ರಮ್ಯ ಜೊತೆ ಬಿಜೆಪಿಗರು ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ.  ರಮ್ಯಾ ಒಪ್ಪಿಕೊಂಡಿದ್ದಾರೆ ಬಿಜೆಪಿಗೆ ಬಂದು ಸ್ಪರ್ಧೆ ಮಾಡುತ್ತಾರೆ ಎಂದು ಬಿಜೆಪಿ ನಾಯಕರ ಮಾಹಿತಿ ಕೊಟ್ಟಿದ್ದಾರೆ. ಒಂದು ವೇಳೆ ಮಂಡ್ಯದಲ್ಲಿ ರಮ್ಯ ನಿಂತರೆ ಸ್ಟಾರ್ ವರ್ಸಸ್ ಸ್ಟಾರ್ ವಾರ್ ನಡೆಯಲಿದೆ.  ಈ ಹಿಂದೆ ಮಂಡ್ಯದಿಂದ ಎಂ.ಪಿ ಕೂಡ ಆಗಿದ್ದ ರಮ್ಯ, ಮಂಡ್ಯ ಜಿಲ್ಲೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿ ಹೊಂದಿದ್ದಾರೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.