ಹೋಟೆಲ್ ಆಹಾರ ಆರೋಗ್ಯವನ್ನು ಹಾಳು ಮಾಡುತ್ತದೆ. ಹೀಗಾಗಿ ಇಂದು ರುಚಿಯಾದ ಆರೋಗ್ಯಕರವಾದ ಮೀನಿನ ಸಾಂಬಾರ್ ಮಾಡುವ ವಿಧಾನ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು:
- ಮೀನು- 1 ಕೆಜಿ (Sea bass)
- ಈರುಳ್ಳಿ-2
- ಟೊಮೆಟೊ-2
- ಅಡುಗೆ ಎಣ್ಣೆ-ಅರ್ಧ
- ದನಿಯಾ – ಅರ್ಧ ಕಪ್
- ಬ್ಯಾಡಗಿ ಮೆಣಸು- 5ರಿಂದ 8
- ತೆಂಗಿನಕಾಯಿ ತುರಿ- 1ಕಪ್
- ಹುಣಸೆಹಣ್ಣು- ಸ್ವಲ್ಪ
- ಬೆಳ್ಳುಳ್ಳಿ- 1
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಕರಿಬೇವು- ಸ್ವಲ್ಪ
- ಜೀರಿಗೆ- 3 ಟೀ ಸ್ಪೂನ್
- ಕಾಳುಮೆಣಸು- 1 ಟೀ ಸ್ಪೂನ್
- ಅರಿಶಿಣ ಪುಡಿ- 1 ಟೀ ಸ್ಪೂನ್
- ಮೆಂತೆಕಾಳು- ಅರ್ಧ ಟೀ ಸ್ಪೂನ್
- ಇಂಗು- ಸ್ವಲ್ಪ
- ಸಾಸಿವೆ- ಸ್ವಲ್ಪ
- ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
- ಹುಣಸೆಹಣ್ಣನ್ನು ನೀರಿನೊಂದಿಗೆ ನೆನೆಸಿಟ್ಟಿರಬೇಕು.
- ಜೀರಿಗೆ, ದನಿಯಾಕಾಳು, ಮೆಂತೆಕಾಳು, ಬ್ಯಾಡಗಿಮೆಣಸು, ಕಾಳುಮೆಣಸುಗಳನ್ನು ಸೇರಿಸಿ ಚೆನ್ನಾಗಿ ಹುರಿದಿಟ್ಟುಕೊಳ್ಳಬೇಕು.
- ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೊ, ಅಡುಗೆ ಎಣ್ಣೆಯನ್ನು ಹಾಕಿ ಫ್ರೈ ಮಾಡಿಕೊಳ್ಳಬೇಕು.
- ನಂತರ ಈ ಮೊದಲು ಹುರಿದಿಟ್ಟುಕೊಂಡ ಮಸಾಲೆ ಪದಾರ್ಥಗಳನ್ನು ಮಿಕ್ಸಿ ಜಾರ್ಗೆ ಸೇರಿಸಿಕೊಂಡು, ತೆಂಗಿನಕಾಯಿ, ಅರಿಶಿಣ, ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು.
- ಬಳಿಕ ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಇಂಗು, ಒಣಮೆಣಸು, ಕರಿಬೇವು, ಹುಣಸೆಹಣ್ಣಿನ ನೀರು, ರುಬ್ಬಿಕೊಂಡಿರುವ ಮಸಾಲೆಯನ್ನು ಹಾಕಿ. ನಿಮಗೆ ಬೇಕಾದ ಪ್ರಮಾಣದಲ್ಲಿ ನೀರು ಮತ್ತು ರುಚಿಗೆ ತಕ್ಕಷ್ಟು ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಬೇಕು.
- ಸಾರು ಕುದಿಯುತ್ತಿದ್ದಂತೆ ಮೀನನ್ನು ಸೇರಿಸಿ ಚೆನ್ನಾಗಿ ಬೇಯಿಸಿದರೆ ರುಚಿಯಾದ ಮೀನಿನ ಸಾರು ಸವಿಯಲು ಸಿದ್ಧವಾಗುತ್ತದೆ.