ಎನ್‌ ಡಿಎ ಅಭ್ಯರ್ಥಿ ದ್ರೌಪದಿ ಮರ್ಮು, ಪ್ರತಿಪಕ್ಷ ಅಭ್ಯರ್ಥಿ ಯಶವಂತ್‌ ಸಿನ್ಹಾ ಅವರಿಗಿಂತ ಭಾರೀ ಮುನ್ನಡೆ.

ನವದೆಹಲಿ: ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆಯ ಮೊದಲ ಹಂತ ಮುಕ್ತಾಯಗೊಂಡಿದ್ದು ಎನ್‌ ಡಿಎ ಅಭ್ಯರ್ಥಿ ದ್ರೌಪದಿ ಮರ್ಮು, ಪ್ರತಿಪಕ್ಷ ಅಭ್ಯರ್ಥಿ ಯಶವಂತ್‌ ಸಿನ್ಹಾ ಅವರಿಗಿಂತ ಭಾರೀ ಮುನ್ನಡೆ ಸಾಧಿಸಿದ್ದಾರೆ.

ಕೇಂದ್ರ ಚುನಾವಣಾಧಿಕಾರಿ ಪಿಸಿ ಮೋದಿ ಗುರುವಾರ ಮಧ್ಯಾಹ್ನ ಮೊದಲ ಹಂತದ ಮತ ಎಣಿಕೆ ಮುಕ್ತಾಯಗೊಂಡ ನಂತರ ವಿವರ ನೀಡಿದ್ದಾರೆ.

ದ್ರೌಪದಿ ಮರ್ಮು ಅವರಿಗೆ 540 ಮತಗಳು ಲಭಿಸಿದ್ದು, ಇದರ ಮೌಲ್ಯ 3,78,000 ಆಗಿದೆ. ಯಶವಂತ್‌ ಸಿನ್ಹಾ 208 ಮತಗಳನ್ನು ಗಳಿಸಿದ್ದು, ಇದರ ಮೌಲ್ಯ 1,45,600 ಆಗಿದೆ.

ಆರಂಭಿಕ ಮತ ಎಣಿಕೆ ವೇಳೆ ಮುರ್ಮು ಪರ ಅಡ್ಡ ಮತದಾನವಾಗಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಎಲ್ಲಾ ಸಂಸದರು ಮತ ಚಲಾಯಿಸಿದರೆ ಪಕ್ಷಗಳು ಘೋಷಿಸಿದಂತೆ ಒಟ್ಟು 539 ಸಂಸದರ ಬೆಂಬಲವನ್ನು ಪಡೆಯಬೇಕಾಗಿತ್ತು. ಒಟ್ಟು ಮತದಾನದಿಂದ 8 ಜನ ಸಂಸದರು ದೂರ ಉಳಿದಿದ್ದರು ಹಾಗೂ 15 ಮತಗಳು ಅಸಿಂಧುಗೊಂಡಿದೆ. ಪ್ರತಿಸ್ಪರ್ಧಿ ಯಶವಂತ್ ಸಿನ್ಹಾಗೆ 237 ಸಮಸದರ ಬೆಂಬಲ ದೊರೆಯಬೇಕಿತ್ತು.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.