ಟಿವೌನೆ: ಸೆನೆಗಲ್ ರಾಜಧಾನಿ ಟಿವೌನೆಯಿಂದ 120 ಕಿಲೋ ಮೀಟರ್ ದೂರದಲ್ಲಿರುವ ಡಾಕರ್ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡು 11 ಹಸುಗೂಸುಗಳು ಸಜೀವ ದಹನವಾಗಿದ್ದು, ಮೂರು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಅಬ್ಡೋಲ್ ಅಜಿಜ್ ಸೈ ಆಸ್ಪತ್ರೆಯಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡು ಅನಾವುತ ಸಂಭವಿಸಿದೆ.
ಬೆಂಕಿಯ ಕೆನ್ನಾಲಿಗೆಯಿಂದ ಉಂಟಾದ ಬಿಸಿ ಮತ್ತು ಹೊಗೆಯಿಂದ ಹನ್ನೊಂದು ಮಕ್ಕಳು ಸಾವನ್ನಪ್ಪಿವೆ. ಈ ಭಯಾನಕ ಘಟನೆಯಿಂದ ರಾಷ್ಟ್ರಾದ್ಯಂತ ಮುರು ದಿನಗಳ ಶೋಕಾಚರಣೆಯನ್ನು ಅಧ್ಯಕ್ಷ ಮ್ಯಾಕ್ಸಿ ಸಾಲ್ ಘೋಷಣೆ ಮಾಡಿದ್ದಾರೆ.
ಅದೃಷ್ಟವಶಾತ್ ಬೆಂಕಿ ಕಾಣಿಸಿಕೊಂಡ ಸಮಯಕ್ಕೆ ವಿದ್ಯುತ್ ಕಡಿತವಾಗಿದೆ. ಇದರಿಂದ ಆಸ್ಪತ್ರೆಯ ಉಳಿದ ಭಾಗ ಅನಾವುತದಿಂದ ಪಾರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರು ಆಸ್ಪತ್ರೆಯ ಹೊರಗೆ ದುಖಿಃಸುತ್ತಿರುವುದು ಕರುಣಾಜನಕವಾಗಿತ್ತು. ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಚಿವರು ಸೇರಿ ಅನೇಕ ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡಿ ದುಖಃತಪ್ತ ಪೋಷಕರನ್ನು ಸಮಾಧಾನ ಪಡಿಸಲು ಯತ್ನಿಸಿದರು.
ಪಶ್ಚಿಮ ಆಫ್ರಿಕಾದಲ್ಲಿರುವ ಸೆನಗಲ್‍ನಲ್ಲಿ ಇತ್ತೀಚೆಗೆ ತಾಯಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಉತ್ತರ ಸೆನೆಗಲ್‍ನ ಲಿಂಗುವೆರೆಯ ಆಸ್ಪತ್ರೆಯಲ್ಲಿ ಕಳೆದ ವರ್ಷ ಸಂಭವಿಸಿದ ಬೆಂಕಿ ಅನಾವುತದಲ್ಲಿ ನಾಲ್ಕು ನವಜಾತ ಶಿಶುಗಳು ಮೃತಪಟ್ಟಿದ್ದವು. ಹೆರಿಗೆ ಸಂದರ್ಭದಲ್ಲಿ ಹಲವು ಹಲವಾರು ತಾಯಂದಿರು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿವೆ.
- ನ್ಯೂಸ್ ಬ್ಯೂರೋ true news ಕನ್ನಡ